ದಿನದ ಸುದ್ದಿ

ಸಾಲ ತೀರಿಸಲು ಆಸ್ತಿ ಮಾರಾಟಕ್ಕೆ ಮುಂದಾದ ವಿಜಯ ಮಲ್ಯ

Published

on

ಸುದ್ದಿದಿನ ಡೆಸ್ಕ್ : ತಲೆಮರಿಸಿಕೊಂಡಿದ್ದ ಮದ್ಯ ದೊರೆ ವಿಜಯ ಮಲ್ಯ ವಿವಿಧೆಡೆ ಮಾಡಿರುವ ಸಾಲ ತೀರಿಸಲು ತನ್ನ ಆಸ್ತಿ ಮಾರಾಟ ಮಾಡಲು ಅನುಮತಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ. ಮಲ್ಯ ಅವರ ಯುಬಿಎಚ್ಎಲ್ (ಯುನೈಟೆಡ್ ಬ್ರೆವರೀಸ್ ಹೋಲ್ಡಿಂಗ್ ಲಿಮಿಟೆಡ್) ಮತ್ತಿತರ ಆಸ್ತಿಗಳು ಹೈಕೋರ್ಟ್ ಅಧೀನದಲ್ಲಿವೆ.

13,900 ಕೋಟಿ ರೂ.‌ಮೌಲ್ಯದ ಆಸ್ತಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವಂತೆ ಯುಬಿಎಚ್ಎಲ್ ಹಾಗೂ ಮಲ್ಯ ಸ್ವತಃ ಹೈಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ ಎಂದು ಲಂಡನ್ ನಲ್ಲಿರುವ ಕಚೇರಿ ತಿಳಿಸಿದೆ.

ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡದ ಕಾರಣಕ್ಕಾಗಿ ಕ್ರಿಮಿನಲ್ ಕೇಸ್ ಪ್ರಕರಣ ದಾಖಿಸಲಾಗಿದೆ. ಕಿಂಗ್‌ಫಿಷರ್ ಏರ್‌‍ಲೈನ್ಸ್ ಕಂಪನಿಗಾಗಿ 9,000ಕೋಟಿ ರೂ. ಸಾಲ ಮಾಡಿದ್ದರು. ಇದು ಒಂದು ದಶಕದಿಂದ ಸ್ಥಗಿತಗೊಂಡಿದೆ.

ಆಸ್ತಿ ಮಾರಾಟ ಮಾಡುವ ಪ್ರಸ್ತಾವನೆಗೆ ಸಿಬಿಐ, ಇಡಿ ಅಡ್ಡಿಪಡಿದರೆ ಇದರ ಹಿಂದೆ ನನ್ನ ವಿರುದ್ಧದ ಅಜೆಂಡಾವಿದೆ ಎಂದಂದಾಗುತ್ತದೆ. ಸಾಲ ಮರುಪಾವತಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆ ಬಂದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version