ಕ್ರೀಡೆ

ಐಪಿಎಲ್‍ನಿಂದ ಮಲ್ಯಾ ಲೇವಾದೇವಿ

Published

on

ಸುದ್ದಿದಿನ ಡೆಸ್ಕ್: ಸಾವಿರಾರು ಕೋಟಿ ರೂಪಾಯಿ ಸುಸ್ತಿದಾರನಾಗಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯಾ ವಿರುದ್ದಧ ಮುಂಬಯಿ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಎರಡನೇ ಆರೋಪಪಟ್ಟಿ ಸಲ್ಲಿಸಿದ್ದು, ಮಲ್ಯ ತನ್ನ ಒಡೆತನದ ರಾಯಲ್ ಚಾಲೆಂಜರ್ಸ್, ಫೋರ್ಸ್ ಇಂಡಿಯಾ ಮೊದಲಾದ ಕಂಪನಿಗಳಿಂದ ಹಣ ಲೇವಾದೇವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಿಂಗ್ ಫಿಷರ್ ವೈಮಾನಿಕ ಸಂಸ್ಥೆಯನ್ನು ಆಧಾರವಾಗಿಟ್ಟುಕೊಂಡು ಹದಿನೇಳು ಬ್ಯಾಂಕ್‍ಗಳಲ್ಲಿ ಒಟ್ಟು 9,900 ಕೋಟಿ ರೂಪಾಯಿ ಸಾಲ ಪಡೆದಿದ್ದರು ಎಂಬುದೂ ಈ ವರದಿಯಿಂದ ದೃಢಪಟ್ಟಿದೆ.
ಮಲ್ಯ ಅವರು ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಹೆಸರಿನಲ್ಲಿ 6,027 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಈ ಹಣದಲ್ಲಿ ವೈಮಾನಿಕ ಸೇವೆಯನ್ನು ಅಭಿವೃದ್ಧಿಗೊಳಿಸುವುದಾಗಿ ಹೇಳಿದ್ದರು. ಆದರೆ, ಈ ಹಣದ ಬಹುತೇಕ ಪಾಲನ್ನು ತಮ್ಮ ಖಾಸಗಿ ಖರ್ಚಿಗೆ ಬಳಸಿಕೊಂಡಿದ್ದರು ಎಂದು ತಿಳಿದುಬಂದಿದೆ. ವಿಶೇಷ ವಿಮಾನದಲ್ಲಿ ತಿರುಗಾಟ, ಪಾರ್ಟಿ ಮೊದಲಾದವುಗಳಿಗೆ ಹಣ ಬಳಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಸಾಲದ ಹಣದ ಕೆಲವು ಪಾಲನ್ನು ಐಪಿಲ್‍ನಲ್ಲಿ, ಲಂಡನ್‍ನಲ್ಲಿರುವ ತಮ್ಮ ಒಡೆತನದ ಫೋರ್ಸ್ ಒನ್ ಸಂಸ್ಥೆ, ಫಾರ್ಮುಲಾ ಒನ್ ಕಂಪನಿಯ ಜಾಹೀರಾತು ಮತ್ತು ಪ್ರಚಾರಕ್ಕಾಗಿ ಬಳಿಸಿದರು ಎಂದು ಚಾರ್ಜ್‍ಶೀಟ್ ಹೇಳಿದೆ.
ಇದಲ್ಲದೆ ಈ ಸಾಲದ ಹಣದ ಕೆಲವು ಪಾಲನ್ನು ಮಲ್ಯ ಅವರು ತಾವು ಒಡೆತನ ಹೊಂದಿದ್ದಾಗಿ ಹೇಳಿಕೊಂಡಿದ್ದ ನಕಲಿ ಕಂಪನಿಗಳ ಹೆಸರಿಗೂ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Trending

Exit mobile version