ದಿನದ ಸುದ್ದಿ
ಮಲ್ಯ ಪ್ರಕರಣಕ್ಕೆ ಮತ್ತೊಂದು ತಿರುವು; ದೇಶ ಬಿಡುವ ಮುನ್ನ ಅರುಣ್ ಜೇಟ್ಲಿ ಭೇಟಿ
ಸುದ್ದಿದಿನ ಡೆಸ್ಕ್: ಲಂಡನ್ನಲ್ಲಿ ವಿಜಯ್ ಮಲ್ಯರ ಅರ್ಜಿ ವಿಚಾರಣೆಯ ಅಂತಿಮ ದಿನ ನಾಟಕೀಯ ತಿರುವು ತೆಗೆದುಕೊಂಡಿದ್ದು, ಮಾರ್ಚ್ 2016ರಲ್ಲಿ ವಿಜಯ ಮಲ್ಯ ದೇಶ ಬಿಡುವ ಮೊದಲು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಸಂಸತ್ತಿನಲ್ಲಿ ಭೇಟಿ ಮಾಡಿದ್ದರು ಎಂದು ವಿಜಯ ಮಲ್ಯ ಹೇಳಿಕೊಂಡಿದ್ದಾರೆ. ಲಂಡನ್ ನಲ್ಲಿ ಸೆಟಲ್ ಆಗಲು ಹೋಗುತ್ತಿರುವುದಾಗಿ ಜೇಟ್ಲಿಗೆ ಲಂಡನ್ ಗೆ ತೆರಳುವ ಮೊದಲು ಹೇಳಿದ್ದರು ಎಂದು ಅವರು ಹೇಳಿದ್ದಾರೆ. ನಾನು ಜೇಟ್ಲಿಯನ್ನು ಸಂಸತ್ತಿನಲ್ಲಿ ಭೇಟಿಯಾಗಿ ಲಂಡನ್ ಗೆ ಹೋಗುತ್ತಿರುವ ವಿಷಯ ತಿಳಿಸಿದ್ದೆ. ಬುಧವಾರ ನ್ಯಾಯಾಲಯದ ಹೊರಗೆ ಈ ವಿಷಯ ಹೇಳಿದರು.