ದಿನದ ಸುದ್ದಿ

ಹೈಸ್ಕೂಲ್ ಮೈದಾನದಲ್ಲಿ ಆಯುಧ ಪೂಜೆ, ವಿಜಯದಶಮಿಯ ಹೂ, ಇತರೆ ವಸ್ತುಗಳ ಮಾರಾಟಕ್ಕೆ ಅವಕಾಶ

Published

on

ಸುದ್ದಿದಿನ,ದಾವಣಗೆರೆ:ಆಯುಧಪೂಜೆ ಹಾಗೂ ವಿಜಯದಶಮಿ ಸಲುವಾಗಿ ಬಾಳೆಕಂಬ, ಹೂ, ಹಣ್ಣು ಮಾವಿನ ತೋರಣ, ಬೂದು ಗುಂಬಳ ಕಾಯಿ, ಕಾಚಿಕಡ್ಡಿ ಹಾಗೂ ಸಗಣಿ ಗುರ್ಜಿಗಳನ್ನು ಮಾರಾಟ ಮಾಡುವುದರಿಂದ ನಗರಾದ್ಯಂತ ಸಂಚಾರ ವ್ಯವಸ್ಥೆಗೆ ಹಾಗೂ ಸಾರ್ವಜನಿಕರಿಗೆ, ತೊಂದರೆಯಾಗುತ್ತಿರುವ ಕಾರಣ ಅಕ್ಟೋಬರ್ 10 ರಿಂದ 12 ರವರೆಗೆ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಮಾತ್ರವೇ ಈ ವಸ್ತುಗಳ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಗರದ ಇತರೆ ಯಾವುದೇ ಭಾಗಗಳಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ಸಾಮಗ್ರಿಗಳನ್ನು ಮಾರಾಟ ಮಾಡಿ, ಉಳಿದ ಸಾಮಗ್ರಿಗಳನ್ನು ಅಲ್ಲಿಯೇ ಬಿಡದೇ ಸಾಗಿಸುವಂತೆ, ತಪ್ಪಿದಲ್ಲಿ ಪ್ರತಿ ಮಾರಾಟಗಾರರಿಂದ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ವಸೂಲಿ ಮಾಡಲಾಗುವುದೆಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version