ದಿನದ ಸುದ್ದಿ
ವಿಜಯಪುರ | 400 ಬಡ ಕುಟುಂಬಗಳ ಹಸಿವಿಗೆ ಮಿಡಿದ ಸಹಹೃದಯಿ ನಿವೃತ್ತ ವಿಷಯ ಪರಿವೀಕ್ಷಕ
ಸುದ್ದಿದಿನ,ವಿಜಯಪುರ/ಚಡಚಣ: ತಾಲ್ಲೂಕಿನ ಗೋಡಿಹಾಳ ಗ್ರಾಮದಲ್ಲಿ 400 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ 25 ಕ್ವಿಂಟಾಲ್ ಕೋಹಿನೂರ ಗೋಧಿ ಧಾನ್ಯ ವಿತರಿಸಿದ ನಿವೃತ್ತ ವಿಷಯ ಪರಿವೀಕ್ಷಕರಾದ ಜಿ.ಕೆ ಮಠ ಅವರು ಸ್ವಖರ್ಚಿನಲ್ಲಿ ಬುಧವಾರ ತಮ್ಮ ಸ್ವಗ್ರಾಮದ ಜನರಿಗೆ ಸಹಾಯ ಹಸ್ತ ನೀಡಿದ್ದಾರೆ.
ಚಡಚಣ ತಹಶೀಲ್ದಾರ್ ಎನ್.ಬಿ ಗೆಜ್ಜೆ, ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಮಹಾದೇವ ಯಲಗಾರ, ಹಲಸಂಗಿ ಜಿ.ಪಂ ಸದಸ್ಯ ಶಿವಶರಣ ಭೈರಗೊಂಡ ಅವರ ಸಮ್ಮುಖದಲ್ಲಿ ಗ್ರಾಮದ ಬಡ ಜನರಿಗೆ ಗೋಧಿ ವಿತರಣೆ ಮಾಡಲಾಯಿತು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರ್ಗದ ಜನರಿಗೆ ದುಡಿಯಲು ಕೆಲಸವಿಲ್ಲದೆ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಯಾರು ಬಳಲಬಾರದೆಂದು ಡಿಡಿಪಿಐ ಕಛೇರಿಯಲ್ಲಿ ವಿಷಯ ಪರಿವಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಿ.ಕೆ ಮಠ ಅವರು ಸದ್ಯ ಚಡಚಣ ಪಟ್ಟಣದಲ್ಲಿ ವಾಸವಾಗಿದ್ದು, ತಮ್ಮ ಸ್ವಗ್ರಾಮ ಗೋಡಿಹಾಳ ಗ್ರಾಮದ ಬಡ ಕುಟುಂಬಗಳಿಗೆ ಉಚಿತವಾಗಿ ಗೋಧಿ ಧಾನ್ಯ ನೀಡಿ ಮಾನವೀಯತೆಯ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ವಿಠ್ಠಲ್ ವಡಗಾಂವ, ಶಿಕ್ಷಕ ವಿಠ್ಠಲ್ ಭೈರಗೊಂಡ, ಪಿಕೆಪಿಎಸ್ ಅಧ್ಯಕ್ಷ ಅಶೋಕ ಖೇಡ, ಗ್ರಾ.ಪಂ ಸದಸ್ಯರಾದ ವಿಠ್ಠಲ್ ಕಟ್ಟಿಮನಿ, ಶರಣು ತೋಳನೂರ, ಸಿದ್ರಾಮ ಗೋರನಾಳ, ಮುಖಂಡರಾದ ಸತೀಶ ತೋಳನೂರ, ಲಕ್ಷ್ಮಣ ಬೊರಗಿ, ಸಿದ್ದಯ್ಯ ಮಠ, ಪ್ರಮೋದ ಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
- ವರದಿ: ಎಮ್. ಸಂತೋಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243