ದಿನದ ಸುದ್ದಿ
ಜಿಲ್ಲೆಯ ರಾಜಕಾರಣದಲ್ಲಿ ನನಗೆ ಅನ್ಯಾಯ; ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ನನ್ನ ಹೋರಾಟ : ವಿನಯ್ ಕುಮಾರ್
ಸುದ್ದಿದಿನ,ದಾವಣಗೆರೆ : ಜಿಲ್ಲೆಯ ರಾಜಕಾರಣದಲ್ಲಿ ಚೆನ್ನಯ್ಯ ಒಡಿಯರ್ ಅವರಿಗೆ ಆದ ಅನ್ಯಾಯ ನನಗೂ ಆಗಿದೆ. ನನ್ನ ಹೋರಾಟ ನನ್ನ ಸ್ವಾಭಿಮಾನದ ಹೋರಾಟ ಒಬ್ಬ ವ್ಯಕ್ತಿ ಪಕ್ಷದ ವಿರುದ್ಧ ಅಲ್ಲ ರಾಜಕೀಯ ಕುತಂತ್ರ ವ್ಯವಸ್ಥೆ ವಿರುದ್ಧ ಎಂದು ವಿನಯ್ ಕುಮಾರ್ ಕಿಡಿ ಕಾರಿದರು.
ವಿನಯ್ ಚಿತ್ತ ಮತದಾರರತ್ತ ಕಾರ್ಯಕ್ರಮದಲ್ಲಿ ಇಂದು ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ಕರ್ನಾಟಕ ಉಪಾಧ್ಯಕ್ಷರೂ, ಅಹಿಂದ ಯುವ ನಾಯಕ ಜಿ.ಬಿ. ವಿನಯ್ ಕುಮಾರ್ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮತದಾರರ ಅಭಿಪ್ರಾಯ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಮತದಾರರು ಅಪೇಕ್ಷಿತ ಅಭ್ಯರ್ಥಿಗೆ ಅವಕಾಶ ವಂಚಿತವಾಗಿರುವುದರಿಂದ ಈ ವ್ಯವಸ್ಥೆಯ ವಿರುದ್ಧ ಚುನಾವಣೆಯಲ್ಲಿ ಪಕ್ಷಗಳು ಜನರ ವಿರುದ್ಧವಾಗಿರುವ ಅಭ್ಯರ್ಥಿಗಳನ್ನು ಸ್ಪರ್ಧೆ ಮಾಡಲು ಅವಕಾಶ ಮಾಡಿದ್ದಾರೆ. ಇಂತಹ ವ್ಯವಸ್ಥೆಯ ವಿರುದ್ಧ ನನ್ನ ಹೋರಾಟವಾಗಿದೆ ಎಂದರು.
ನನ್ನ ಹೋರಾಟ ವ್ಯಕ್ತಿ ಪಕ್ಷದ ವಿರುದ್ಧ ಅಲ್ಲ. ನನ್ನದು ಸ್ವಾಭಿಮಾನದ ಹೋರಾಟ. ದಾವಣಗೆರೆ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕನಸ್ಸನ್ನು ಕಂಡಿದ್ದ ನನಗೆ ಅನ್ಯಾಯವಾಗಿದೆ. 30 ವರ್ಷಗಳ ಹಿಂದೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ. ಚೆನ್ನಯ್ಯ ಒಡಿಯರ್ ರವರಿಗೆ ಅನ್ಯಾಯವಾಗಿದ್ದು ಇಂದು ನನಗೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಈ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು. ಶೋಷಿತ ಸಮುದಾಯದವರು. ಹಿಂದುಳಿದ ವರ್ಗ ಅಲ್ಪಸಂಖ್ಯಾತ ಸಮುದಾಯಗಳು ಜಾಗೃತರಾಗಬೇಕಾಗಿದೆ ಎಂದರು.
ಹರಪನಹಳ್ಳಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪರಶುರಾಮಪ್ಪ, ಯುವ ಮುಖಂಡ ಶರತ್ ಕುಮಾರ್,
ರಿಯಾಜ್ ಅಹ್ಮದ್, ಅನಂತ ಚಿಕ್ಕಬೂದಳ್, ಪರಶುರಾಮ್ ಭಟ್ಲಕಟ್ಟೆ, ಪುರಂದರಲೋಕಿಕೆರೆ,ಇತರೆ ಮುಖಂಡರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243