ಲೈಫ್ ಸ್ಟೈಲ್
ವೈರಲ್ ಆಯ್ತು ಸೆಲಿಬ್ರಿಟಿಗಳ ಏರಿಯಲ್ ಯೋಗ ಫೋಟೋ
ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಇಡೀ ಭೂಮಂಡಲವೇ ಯೋಗಾಸನ ಗಳಲ್ಲಿ ಮುಳುಗಿರುವಾಗ, ಬಾಲಿವುಡ್ ತಾರೆಯರ ಏರಿಯಲ್ ಯೋಗಕ್ಕೆ ಮನಸೋತಿದ್ದಾರೆ. ಜೂಹಿ ಚಾವ್ಲ, ಮಲೈಕ ಅರೋರ ಖಾನ್, ಅಲಿಯಾ ಭಟ್,ಹೀಗೆ ಹಲವಾರು ಸೆಲಿಬ್ರಿಟಿ ಗಳು ಈ ಹಾರಾಡುವ ವೈಮಾನಿಕ ಯೋಗ ಗೆ ಮನಸೋತಿದ್ದಾರೆ.
ಏನಿದು ವೈಮಾನಿಕ ಯೋಗ?
ಯೋಗ ಮತ್ತು ನೃತ್ಯ ಸೇರಿದಂತೆ ಜೋಕಾಲಿಯಲ್ಲಿ ಹಾರಾಡುತ್ತಾ, ಗಾಲಿಯಲ್ಲಿ ತೇಲುತ್ತಾ, ಮೈ-ಮನಕ್ಕೆ ವ್ಯಾಯಾಮ ಮಾಡಿಸುವ ಪರಿಯೇ “ವೈಮಾನಿಕ ಯೋಗ “. ಉದ್ದನೆಯ ನೈಲಾನ್ ಬಟ್ಟೆಗಳನ್ನು ಸರಪಳಿಗಳ ಸಹಾಯದಿಂದ ಮೇಲ್ಛಾವಣಿ ಗೆ ನೇತುಹಾಕಿ, ಜೋತಾಡುತಾ ವ್ಯಾಯಾಮ ಮಾಡಲಾಗುತ್ತದೆ.
ಏನೇ ಹೊಸದು ಬಂದರೂ ಬಿಡದೇ ಟ್ರೈ ಮಾಡುವ ನಮ್ಮ ಸೆಲಿಬ್ರಿಟಿ ಗಳು, ಈ ಹಕ್ಕಿ ಯಂತೆ ಜೋಗುಳಿಯ ಬಟ್ಟೆ ಕಟ್ಟಿ ತೇಲಾಡುವ “ಏರಿಯಲ್ ಯೋಗ ” ಗೆ ಫುಲ್ ಫಿದಾ.
ಏನು ಪ್ರಯೋಜನ?
ಈ ರೀತಿಯ ಆಸನಗಳು ಮೈ-ಮನಸ್ಸನ್ನು ಹಗುರಾಗಿಸುತ್ತದೆ ಹಾಗೂ ಜಡ ಹಿಡಿದ ದೇಹಕ್ಕೆನಮ್ಯತೆ ತಂದು ಕೊಡುತ್ತದೆ. ಮೂಳೆ-ಮಾಂಸಖಂಡಗಳನ್ನು ಗಟ್ಟಿ ಮಾಡುತ್ತದೆ. ಕೇವಲ ದೇಹದ ಒಂದು ಭಾಗಕ್ಕೆ ಮಾತ್ರ ಸೀಮಿತ ವಾಗಿರದೆ, ಇಡೀ ದೇಹಕ್ಕೆ ವ್ಯಾಯಾಮ ಮಾಡಲಾಗುತ್ತದೆ. ಟೋನ್ಡ್ ಮಸಲ್ ಪಡೆಯಲು ಸಹಕಾರಿ ಎನ್ನಲಾಗಿದೆ.
ಆಲಿಯಾ ಭಟ್ ಗೆ ಈ ಏರಿಯಲ್ ಯೋಗ ತುಂಬಾ ಖುಷಿ ನೀಡುತ್ತದೆಯಂತೆ. ತಮ್ಮ ಪ್ರವಾಸದಲ್ಲೂ ಈ ಆರಾಮದಾಯಕ ವೈಮಾನಿಕ ಯೋಗ ವನ್ನು ಇವರು ಬಿಡುವುದಿಲ್ಲ ವಂತೆ.
ಬಿಪಾಷಾ ಬಸು ..ತಮ್ಮ ಪತಿಯೊಂದಿಗೆ ಯೋಗ ದಿನಾಚರಣೆ ಆಚರಿಸುತ್ತಾ.. ಏರಿಯಲ್ ಯೋಗ ನನಗೆ ತುಂಬ ಇಷ್ಟವಾದ ಒಂದು ವ್ಯಾಯಾಮ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಜೂಹಿ ಚಾವ್ಲ ಕೂಡ ಕಳೆದ ವರ್ಷ ಯೋಗ ದಿನಾಚರಣೆ ಯಂದು ವೈಮಾನಿಕ ಯೋಗ ಮಾಡುವ ಭಂಗಿಯ ಫೋಟೋ ಶೇರ್ ಮಾಡಿದ್ದರು.
ಬೆಂಗಳೂರಲ್ಲೂ ಸದ್ದು ಮಾಡಿದೆ ಏರಿಯಲ್ ಯೋಗ!
ಸಿಲಿಕಾನ್ ಸಿಟಿಯಲ್ಲೂ ಈ ರೀತಿಯ ಏರಿಯಲ್ ಯೋಗ ತರಬೇತಿ ನಡೆಯುತ್ತಿದ್ದು, ಹಲವಾರು ಬೆಂಗಳೂರಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಖ್ಯಾತ ಫಿಟ್ನೆಸ್ ಮತ್ತು ಗ್ರೂಮಿಂಗ್ ಎಕ್ಸ್ಪರ್ಟ ಜೋತ್ಸನಾ ವೆಂಕಟೇಶ ರ ಪ್ರಕಾರ.. “”ಹಕ್ಕಿ ರಂತೆ ಹಾರಾಡುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ.. ಅದನ್ನು ಸಾಕಾರ ಗೊಳಿಸಿಕೊಳ್ಳಲು ಏರಿಯಲ್ ಯೋಗ ಸಹಾಯ ಮಾಡುತ್ತದೆ..ಫಿಟ್ ಆಗಿರಲು ದಿನನಿತ್ಯ 45 ನಿಮಿಷಗಳ ವರ್ಕೌಟ್ ಅತ್ಯಾವಶ್ಯಕ”.
ಇನ್ನು ಮತ್ತೊಬ್ಬ ಫಿಟ್ನೆಸ್ ಫ್ರೀಕ್
ನಿಹಾರಿಕಾ( ನಿಕ್ಕೀ) ಅವರ ಪ್ರಕಾರ… ” ಯೋಗ ನಿಮ್ಮ ಮೈ-ಮನಸ್ಸನ್ನು ಶುದ್ಧ ಗೊಳಿಸುತ್ತದೆ ಅಲ್ಲದೇ…ಸದಾ ಚಿರತೆ ಯೌವ್ವನ ದಿಂದಿರಲು ಸಹಾಯಕಾರಿ ಆಗಿದೆ”.