ಲೈಫ್ ಸ್ಟೈಲ್
ವೈರಲ್ ಆಯ್ತು ‘ತಿರಂಗ ಮೇಕಪ್’..!
72 ನೇ ಸ್ವತಂತ್ರ ದಿನಾಚರಣೆ ಗೆ ದಿನಗಣನೆ ಶುರುವಾಗಿ ರುವ ಹಿನ್ನೆಲೆಯಲ್ಲಿ ಬ್ಯೂಟಿ ಪ್ರಪಂಚವೂ ಕೇಸರಿ-ಬಿಳಿ-ಹಸಿರು ಅಲೆಯಲ್ಲಿ ಮಿಂದೇಳುತ್ತಿದೆ..ತಿರಂಗ ಬಣ್ಣದ ಬಟ್ಟೆ ಅಷ್ಟೇ ಅಲ್ಲದೆ, ಮೇಕಪ್ ದುನಿಯಾದಲ್ಲಿ ತಿರಂಗ ದರ್ಬಾರು ಶುರುವಾಗಿದೆ.
ದೇಶಪ್ರೇಮ ಸಾರುವ ತಿರಂಗ ಮೇಕಪ್ ಈ ತಿಂಗಳ ಪ್ರಮುಖ ಆಕರ್ಷಣೆ. ಚಿಣ್ಣರಿಂದ ಹಿರಿಯರ ವರೆಗೂ ಪ್ರತಿ ಭಾರತೀಯನೂ ಹೆಮ್ಮೆಯಿಂದ ಬೀಗುವ ದಿನ ಆಗಸ್ಟ್ 15. ಈ ವಿಶೇಷ ದಿನದ ಸಂಭ್ರಮಾಚರಣೆಯ ಸಲುವಾಗಿ ತಿರಂಗ ಮೇಕಪ್ ಬ್ಯೂಟಿ ಪ್ರಪಂಚದಲ್ಲಿ ರಂಗೇರಿದೆ.
ತಿರಂಗ ಐ-ಮೇಕಪ್, ತಿರಂಗ ಐ-ಲೈನರ್, ತಿರಂಗ
ಲಿಪ್ ಆರ್ಟ್..ಹೀಗೆ ತಮ್ಮದೇ ಆದ ವಿನೂತನ ರೀತಿಯಲ್ಲಿ ಬ್ಯೂಟಿ ತಜ್ಞರು ದೇಶಪ್ರೇಮ ವ್ಯಕ್ತ ಪಡಿಸುತ್ತಿದ್ದಾರೆ. ಮಹಿಳಾಲೋಕ ಸ್ವತಂತ್ರ ದಿನಾಚರಣೆ ಗೆ ತನ್ನದೇ ವಿಭಿನ್ನ ರೀತಿಯಲ್ಲಿ ಸಿದ್ಧ ಗೊಂಡಿದೆ.
ಎಚ್ಚರಿಕೆ!
ತಿರಂಗ ಮೇಕಪ್ ಮಾಡುವಾಗ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗದಂತೆ ಜಾಗರೂಕತೆ ವಹಿಸಬೇಕು.
-ಚಿತ್ರಶ್ರೀ ಹರ್ಷ
ಬೆಂಗಳೂರು