ದಿನದ ಸುದ್ದಿ
ಎಫ್‌ಬಿಯಲ್ಲಿ ವೈರಲ್ ಆದ ರಿಜಿಜು ಫಿಟ್‌ನೆಸ್ ವಿಡಿಯೊ..!
ಸುದ್ದಿದಿನ,ಡೆಸ್ಕ್ : ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ‘Hum Fit Toh India Fit’ ಕ್ಯಾಂಪೇನ್‌ಗೆ ಕೇಂದ್ರ ಗೃಹ ಇಲಾಖೆ ಸಹಾಯಕ ಸಚಿವ ಕಿರಣ್ ರಿಜಿಜು ಅವು ಕೈ ಜೋಡಿಸಿದ್ದಾರೆ.
ರಿಜಿಜು ಅವರು ತಮ್ಮ ಕಚೇರಿಯಲ್ಲಿ ಪ್ರದರ್ಶಿಸಿರುವ ಫಿಟ್‌ನೆಸ್ ವಿಡಿಯೊ ಸದ್ಯ ವೈರಲ್ ಆಗಿದೆ. ಈಗಾಗಲೇ 90 ಸಾವಿರ ಮಂದಿ ಈ ವಿಡಿಯೊವನ್ನು ಲೈಕ್ ಮಾಡಿದ್ದು, ಹದಿನೈದು ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೊ ವೀಕ್ಷಿಸಿದ್ದಾರೆ.
ಫಿಟ್‌ನೆಸ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಥೋಡ್ ಅವರು ಇತ್ತೀಚೆಗೆ ‘Hum Fit Toh India Fit’ ಎಂಬ ಹೊಸ ಆಂದೋಲನ ಆರಂಭಿಸಿದ್ದರು. ಇದನ್ನು ಸ್ವೀಕರಿಸಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಚಾಲೆಂಜ್ ಸ್ವೀಕರಿಸಲಿ ಎಂದು ಟ್ವೀಟ್ ಮಾಡಿದ್ದರು. ಕೊಹ್ಲಿ ಅವರ ಫಿಟ್‌ನೆಸ್ ವಿಡಿಯೊ ಕೂಡ ಈ ಹಿಂದೆ ವೈರಲ್ ಆಗಿತ್ತು.