ಕ್ರೀಡೆ

ಕೊಹ್ಲಿ – ಅನುಷ್ಕಾ ಡೈವೋರ್ಸ್..!?

Published

on

ಸುದ್ದಿದಿನ ಡೆಸ್ಕ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ಬಾಲಿವುಡ್​ನ ಖ್ಯಾತ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದಿರುವುದಾಗಿ ಸಾಮಾಜಿಕ ಜಾಲತಾಣಗಣಲ್ಲಿ ವೈರಲ್ ಆಗಿದೆ. ಅಲ್ಲದೆ, ಕೆಲ ಕಿಡಿಗೇಡಿಗಳ ಕೃತ್ಯದಿಂದ #VirushkaDivorce ಎಂಬ ಹ್ಯಾಷ್​ ಟ್ಯಾಗ್ ಸಹ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ವಿವಾಹಕ್ಕೂ ಮುಂಚೆಯೇ ಪ್ರಕಟವಾದ ಸುದ್ದಿಯೊಂದಕ್ಕೆ ಸಂಬಂಧಿಸಿ ಈಗ ವಿರುಷ್ಕಾ ಡಿವೋರ್ಸ್ ಎಂಬ ವದಂತಿ ವೈರಲ್ ಆಗುತ್ತಿದೆ. ಇದು ಹಳೆಯ ಸುದ್ದಿಯಾದ್ರೂ, ಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ನೆಟ್ಟಿಗರು ವೈರಲ್ ಮಾಡುತ್ತಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅವರ ನಟಿ ಅನುಷ್ಕಾ ಶರ್ಮಾ 2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ವಿವಾಹವಾಗಿದ್ದರು. ಮದುವೆಯಾದಾಗಿನಿಂದಲೂ ವಿರುಷ್ಕಾ ದಂಪತಿ ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version