ಕ್ರೀಡೆ
ಹತ್ತು ವರ್ಷಗಳ ನಂತರ ವಿರಾಟ್ ಕೊಹ್ಲಿ ಸಿನಿಮಾಗೆ ರಿಎಂಟ್ರಿ; 28ಕ್ಕೆ ಟ್ರೇಲರ್ ರಿಲೀಸ್
ಸುದ್ದಿದಿನ ಡೆಸ್ಕ್: ಹತ್ತು ವರ್ಷದ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಿನಿಮಾಗೆ ರಿಎಂಟ್ರಿ ಕೊಡುತ್ತಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಖುಷಿ ಹಂಚಿಕೊಂಡಿರುವ ಕೊಹ್ಲಿ ಹತ್ತು ವರ್ಷಗಳ ಬಳಿಕ ನಟಿಸುತ್ತಿರುವ ಸಿನಿಮಾದ ಶೇರ್ ಮಾಡಿಕೊಂಡಿದ್ದಾರೆ.
ಟ್ವಿಟರ್ ನಲ್ಲಿ ರಿಲೀಸ್ ಮಾಡಿರುವ ಸಿನಿಮಾ ಪೋಸ್ಟರ್ ನಲ್ಲಿ ಆಕ್ಷನ್ ಪೋಸ್ ನೀಡಿದ್ದಾರೆ. ಸಿನಿಮಾದಲ್ಲಿ ನಾಯಕ ನಟನಾಗಿರುವ ಕೊಹ್ಲಿಗೆ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಹತ್ತು ವರ್ಷಗಳ ಬಳಿಕ ವಿರಾಟ ಕೊಹ್ಲಿ ಕೊಹ್ಲಿ ರಿಎಂಟ್ರಿ ಕೊಡುತ್ತಿರುವ ಸಿನಿಮಾದ ಟ್ರೇಲರ್ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಲಿದೆ.