ಕ್ರೀಡೆ
ಸೋತ ಟೀಂ ಇಂಡಿಯಾಗೆ ಧೈರ್ಯ ತುಂಬಿದ ವೀರೇಂದ್ರ ಸೆಹ್ವಾಗ್
ಸುದ್ದಿದಿನ ಡೆಸ್ಕ್: ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತ ಟೀಮ್ ಇಂಡಿಯಾಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಧೈರ್ಯ ತುಂಬಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ
ನೇತ್ರತ್ವದ ಭಾರತ ತಂಡ ಹಲವು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಕೆಲವೊಂದು ಸಲ ಬ್ಯಾಟ್ ನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬರುವುದಿಲ್ಲ. ಜೊತೆಗೆ ವಿದೇಶಿ ಪ್ರವಾಸಕ್ಕೂ ಮುನ್ನ ಅಭ್ಯಾಸ ಮಾಡುವುದು ಅವಶ್ಯಕ ಎಂದು ಧೈರ್ಯದ ಮಾತು ಹೇಳಿದ್ದು, ಟೀಮ್ ಇಂಡಿಯಾ ಆಟಗಾರರಿಗೆ ಆತ್ಮ ಸ್ಥೈರ್ಯ ತುಂಬಿದಂತಾಗಿದೆ.