ದಿನದ ಸುದ್ದಿ

ದಾವಣಗೆರೆ | ವಿಶ್ವ ಬಂಧು ಕಲ್ಯಾಣ ಪ್ರೌಢ ಶಾಲೆ ; ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೂಲಿ ಕಾರ್ಮಿಕರ ಮಕ್ಕಳ ಸಾಧನೆ

Published

on

ಸುದ್ದಿದಿನ,ದಾವಣಗೆರೆ : ಲೆನಿನ್ ನಗರದ ಶ್ರೀ ವಿಶ್ವ ಬಂಧು ಕಲ್ಯಾಣ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚು ಅಂಕ ಪಡೆದು ಶಿಕ್ಷಣದಲ್ಲಿ ಸಾಧನೆ ಮಾಡಿರುವುದು ಸಂತೋಷವಾಗಿದೆ ಎಂದು ಕಾರ್ಯದರ್ಶಿ ಎಚ್.ಆರ್.ರವೀಂದ್ರನಾಥ್ ಮತ್ತು ಮುಖ್ಯ ಶಿಕ್ಷಕ ಮಾರುತಿ ಕೆ.ಓ ಅಭಿಪ್ರಾಯ ವ್ಯಕ್ತಪಡಿಸಿದರು.

ಯಶವಂತ ಆರ್ – 460, ವಿನಯ್ ವೈ -449, ಶಿವಾನಿ ಎಸ್ – 430, ಸಹನ ಎಸ್ ಮತ್ತು, ಇಂದ್ರ.ಇ ಸಮನಾಗಿ 406 ಅಂಕಗಳನ್ನು ಪಡೆದಿದ್ದು 08 ವಿದ್ಯಾರ್ಥಿಗಳು ಪ್ರಥಮ ಸ್ಥಾನ ದಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಕೊರೋನ ಪರಿಣಾಮದಿಂದ ಮನೆಯ ಬಡತನಕ್ಕೆ ನೆರವಾಗಲು ಶಾಲೆ ಬಿಡಬೇಕೆಂದು ನಿರ್ಧರಿಸಿದ್ದ ಮಕ್ಕಳನ್ನು ಹಾಗೂ ಪೋಷಕ ರನ್ನು ಮನವೊಲಿಸಿ ಶಿಕ್ಷಕರು ಶಾಲೆಗೆ ಕರೆತಂದಿದ್ದರು,ಅಂತಹ ಮಕ್ಕಳು ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಪಡೆದಿರುವುದಕ್ಕೆ ಸಂಸ್ಥೆ ಕಾರ್ಯದರ್ಶಿ ಹೆಚ್ ಆರ್ ರವೀಂದ್ರನಾಥ. ಮುಖ್ಯ ಶಿಕ್ಷಕ ಮಾರುತಿ ಕೆ.ಓ. ಹಾಗೂ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version