ದಿನದ ಸುದ್ದಿ
ಸರಿಗಮಪ ವಿನ್ನರ್ ವಿಶ್ವಪ್ರಸಾದ್
ಜೀ ಕನ್ನಡ ವಾಹಿನಿ ಪ್ರಸಿದ್ಧ ಸರಿಗಮಪ ಲಿಟಲ್ ಚಾಂಪ್ಸ್ ಹದಿನಾಲ್ಕನೇ ಸೀಸನ್‍ನ ವಿನ್ನರ್ ಆಗಿ ವಿಶ್ವಪ್ರಸಾದ್ ಹೊರಹೊಮ್ಮಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‍ನ ವೈರ್ಟ್ ಆರ್ಕಿಡ್ ವೇದಿಕೆಯಲ್ಲಿ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾದ ಹಂಸಲೇಖ, ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರು ವಿಶ್ವಪ್ರಸಾದ್ ಅವರು ವಿಜೇತರಾಗಿರುವುದನ್ನು ಅಧಿಕೃತವಾಗಿ ಘೋಷಿಸಿದ್ದರು.
ಕಾರ್ಯಕ್ರಮದ ವಿನ್ನರ್ ಯಾರೆಂಬ ಬೆಟ್ಟಿಂಗ್, ವಾಟ್ಸ್ ಆಪ್ ಗಾಸಿಪ್‍ಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು, ತೀರ್ಪುಗಾರರ ವೋಟ್‍ಅನ್ನು ಪರಿಗಣಿಸಿ ವಿಜೇತರನ್ನು ಘೋಷಿಸಲಾಗಿದೆ ಎಂದು ಜೀ ಕನ್ನಡ ಮೂಲಗಳು ತಿಳಿಸಿವೆ.
ಈ ಬಾರಿ ಫೈನಲ್ಸ್‍ನಲ್ಲಿ ಉಡುಪಿ ಮೂಲದ ಅಭಿಜಾತ್ ಭಟ್, ಇಟಗಿಯ ವಿಶ್ವಪ್ರಸಾದ್, ಬಳ್ಳಾರಿಯ ಶಿಶು ತಾನ್ಸೇನ್ ಜ್ಞಾನೇಶ್, ಬೆಂಗಳೂರಿನ ಕೀರ್ತನಾ, ಚನ್ನಗಿರಿಯ ತೇಜಸ್ ಶಾಸ್ತ್ರಿ ಪ್ರವೇಶಿಸಿದ್ದರು. ಇದರ ಮಧ್ಯೆ ವಿಶ್ವಪ್ರಸಾದ್ ಸಂಗೀತ ಪ್ರಿಯರ ಮನಸ್ಸನ್ನು ಗೆದ್ದು ವಿಜೇತರಾಗಿ ಹೊರಹೊಮ್ಮಿದ್ದಾರೆ.