ರಾಜಕೀಯ
ಸಕಲೇಶಪುರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ; ಸಾಂತ್ವನ ಹೇಳಿದ ಎಚ್.ಡಿ. ರೇವಣ್ಣ
ಸುದ್ದಿದಿನ ಡೆಸ್ಕ್ |ಲೋಕೋಪಯೋಗಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಡಿ ರೇವಣ್ಣನವರ ಇಂದು ಸಕಲೇಶಪುರ ನೆರೆ ಪೀಡಿತ ಪ್ರದೇಶ, ಬಿಸ್ಲೆ ಬಳಿ ಕುಸಿತಕಂಡ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲದೇ ನಿರಾಶ್ರಿತ ಕೇಂದ್ರಕ್ಕೆ ಬೇಟಿ ನೀಡಿ ಸಾಂತ್ವನ ಹೇಳುವ ಮೂಲಕ ಅವರಿಗೆ ಧೈರ್ಯವನ್ನು ತುಂಬಿದರು.
ಹಾಸನ ಜಿಲ್ಲೆಯ ಬಿಸ್ಲೆ, ಪಟ್ಲ, ಮಾಗೇರಿ, ವಣಗೂರು, ಹಿಜ್ಜನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ
ದರ್ಶನ್ ಕೇಂದ್ರದ ಸದಸ್ಯರುಗಳಿಗೆ ಸಾಂತ್ವನ ಹೇಳಿದರು ಬಳಿಕ ಸುಬ್ರಹ್ಮಣ್ಯ ಮತ್ತು ಬೆಂಗಳೂರು ನಡುವಿನ ಬಿಸಿಲೆ ಘಾಟ್ ನಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿದಿರುವುದನ್ನ ಖುದ್ದು ಸ್ಥಳಕ್ಕಾಗಮಿಸಿ ವೀಕ್ಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ರೇವಣ್ಣ ಈಗಾಗಲೇ ನೆರೆ ಪೀಡಿತ ಪ್ರದೇಶಕ್ಕೆ ಬೇಕಾಗುವ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಯಾರು ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಭಾಗದಲ್ಲಿ ಆಗಿರುವ ಅವಘಡವನ್ನ ಸರಿಪಡಿಸಲು ಸುಮಾರು ಸುಮಾರು 100 ಕೋಟಿಗೂ ರೂಪಾಯಿಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತೇನೆ. ಜೊತೆಗೆ ಅವಶ್ಯಕತೆ ಬಿದ್ದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಪ್ರಧಾನಮಂತ್ರಿ ನ ಭೇಟಿ ಮಾಡಿದ ಭೇಟಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಸ್ಸಿಸುವುದಾಗಿ ತಿಳಿಸಿದರು.
ಇದಲ್ಲದೇ ಈಗ ಸದ್ಯ ತಾತ್ಕಾಲಿಕವಾಗಿ ಜಿಲ್ಲಾಡಳಿತದಿಂದ ಸಂತ್ರಸ್ತರಿಗೆ ಬೇಕಾಗುವಂತಹ ಆಹಾರ ಪದಾರ್ಥಗಳಿಂದ ಹಿಡಿದು ಎಲ್ಲವನ್ನೂ ಕೂಡ ಒಂದು ತಿಂಗಳಿಗೆ ಆಗುವಷ್ಟು ಪಡಿತರ ಸಾಮಗ್ರಿಗಳನ್ನು ಒದಗಿಸಿಕೊಡಲಾಗುವುದು. ಏನೋ ಮನೆ ಕಳೆದುಕೊಂಡವರಿಗೆ ಜೊತೆಗೆ ಭೂಕುಸಿತದಿಂದ ಹಾನಿಯುಂಟಾದ ಕುಟುಂಬಕ್ಕೆ ಪರಿಹಾರವನ್ನ ನೀಡುವುದಾಗಿ ತಿಳಿಸಿದ್ರು. ಅಲ್ಲದೇ ಹಾಸನ ಹಾಲು ಒಕ್ಕೂಟದಿಂದ ಬೇಕಾಗುವಂತ ಹಾಲಿನ ಉತ್ಪನ್ನಗಳನ್ನ ನಾಳೆಯೇ ಕಳುಹಿಸುವುದಾಗಿ ಹೇಳಿದರು.
ಒಟ್ಟಾರೆ ಮಹಾಮಳೆಯಿಂದ ಸಕಲೇಶಪುರ ತಾಲೂಕಿನ ಹಲವು ಭಾಗಗಳಿಗೆ ಸಾಕಷ್ಟು ಹಾನಿಯಾಗಿದೆ. ಮಂಗಳೂರು ಬೆಂಗಳೂರಿಗೆ ಸಂಪರ್ಕಿಸುವ ಬಿಸಿಲೆ ಘಾಟ್ ಹಾಗೂ ಶಿರಾಡಿಘಾಟ್ ಎರಡು ರಸ್ತೆಗಳು ಕೂಡ ತನ್ನ ಸಂಪರ್ಕ ಕಡಿದುಕೊಂಡಿದೆ. ರಸ್ತೆಗಳು ಮತ್ತೆ ಯಥಾ ಸ್ಥಿತಿಗೆ ಬರಬೇಕಾದರೇ ಆರು ತಿಂಗಳುಗಳ ಕಾಲ ಬೇಕಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401