ಲೈಫ್ ಸ್ಟೈಲ್

ರಕ್ತಸ್ರಾವ ತಡೆಯಲು ವಿಟಮಿನ್ ಕೆ ಉಪಯುಕ್ತ

Published

on

1935ರಲ್ಲಿ ಎಚ್. ಡ್ಯಾಂ ಎಂಬ ವಿಜ್ಞಾನಿ ಎಳೆಯ ಕೋಳಿ ಮೇಲೆ ಮರಿಗಳಲ್ಲಿ ರಕ್ತ ಸ್ರಾವ ಆಗುವುದನ್ನು ಗುರುತಿಸಿದರು. ರಕ್ತದಲ್ಲಿ ಪ್ರೊಥ್ರೊಂಬಿನ್ ಅಂಶದ ಕೊರತೆಯಿಂದ ಹೀಗಾಗಿರುವುದು ಕಂಡು ಬಂದಿತು. ಆ ಮರಿಗಳಿಗೆ ಆಲ್ಫಾಲ್ಫಾ ಮತ್ತು ಹಂದಿ ಲಿವರ್‍ನ ಮೇಧಸ್ಸು ನೀಡುತ್ತಲೂ ರಕ್ತಸ್ರಾವ ನಿಂತಿತು. 1939ರಲ್ಲಿ ವಿಟಮಿನ್ ಕೆ ಗೆ ಸ್ವಂತ ಅಸ್ತಿತ್ವವನ್ನು ನೀಡಲಾಯಿತು.

ವಿಟಮಿನ್ ಕೆ1 ಆಲ್ಫಾಲ್ಫಾದಲ್ಲಿ, ಸಸ್ಯಾಹಾರದಲ್ಲಿ ದೊರೆಯುತ್ತದೆ. ವಿಟಮಿನ್ ಕೆ2 ವಿವಿಧ ಬ್ಯಾಕ್ಟೀರಿಯಾಗಳಿಂದ ತಯಾರಿಸಲ್ಪಡುತ್ತದೆ. ಲಿವರ್‍ನಲ್ಲಿರುವ ವಿಟಮಿನ್ ಕೆ ಸಂಗ್ರಹವು 50% ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಂದ ತಯಾರಾಗಿದೆ ಎಂದು ಅಧ್ಯಯನಗಳು ದೃಢಪಡಿಸಿವೆ. ಪಿತ್ತರಸದ ಸಹಕಾರದಿಂದ ಇದು ಮೇದಸ್ಸಿನೊಂದಿಗೆ ಹೀರಿಕೊಳ್ಳಲ್ಪಡುವುದು. ಲಿಂಫ್ ಗ್ರಂಥಿಗಳ ಮೂಲಕ ರಕ್ತವನ್ನು ಸೇರಿಸುತ್ತದೆ. ಆಹಾರೇತರ ಪದ್ಧತಿಯಿಂದ ಶರೀರಕ್ಕೆ ಸೇರಿಸಲ್ಪಟ್ಟ ವಿಟಮಿನ್ ಕೆ ಮಲದ ಮೂಲಕ ಹೊರಹೋಗುವುದು.

ಪ್ರಯೋಜನ

ವಿಟಮಿನ್ ಕೆ ನೋವು ನಿವಾರಕ ಮಾತ್ರೆಗಳು, ಕ್ಷಕಿರಣ ಪರೀಕ್ಷೆ ಮತ್ತು ಫ್ರಿಜನಲ್ಲಿ ಶೇಖರಿಸಿದ ಆಹಾರಗಳಲ್ಲಿ ನಷ್ಟಗೊಳ್ಳುವುದು. ಇದಕ್ಕಾಗಿ ಅತ್ಯಂದ ಪೌಷ್ಟಿಕ ಆಹಾರವೇನೂ ಬೇಕಾಗುವುದಿಲ್ಲ. ವಿಟಮಿನ್ ಕೆ ಸರಿಯಾಗಿ ಹೀರಲ್ಪಡದಿದ್ದಾಗ, ರೋಗನಿರೋಧಕಗಳನ್ನು ನುಂಗಿ ಕರುಳಿನ ಬ್ಯಾಕ್ಟೀರಿಯಾಗಳು ನಾಶವಾಗಿ ವಿಟಮಿನ್ ಕೆ ಶರೀರದಲ್ಲಿ ಕಡಿಮೆಯಾಗುವುದಲ್ಲದೇ, ರಕ್ತಸ್ರಾವ ಅಧಿಕವಾಗಿತ್ತದೆ. ನವಜಾತ ಶಿಶುಗಳಲ್ಲಿ ವಿಟಮಿನ್ ಇರುವುದಿಲ್ಲ. ಕಡಿಮೆ ತೂಕದ ಮಕ್ಕಳಲ್ಲಿ ರಕ್ತಸ್ರಾವವಾಗಬಹುದು. ಹೀಗಾದಾಗ ವಿಟಮಿನ್ ಕೆ ನೀಡ ಬೇಕಾಗುತ್ತದೆ. ಮಗುವಿನ ತಾಯಿಗೆ ರಕ್ತ ಹೆಪ್ಪುಗಟ್ಟದಿರುವ ಔಷಧಿ ನೀಡಿದ್ದಲ್ಲಿ ನವಜಾತ ಶಿಶುಗಳಿಗೆ 2-4 ಮಿ.ಗ್ರಾಂ ವಿಟಮಿನ್ ನೀಡ ಬೇಕಾಗುತ್ತದೆ.

ಪಿತ್ತನಾಳದ ತೊಂದರ ಇದ್ದಲ್ಲಿ ಮೇಧೋಜೀರಕ ರಸ, ಪಿತ್ತರಸ ಜೀರ್ಣಾಂಗಗಳಿಗೆ ತಲುಪುವುದಿಲ್ಲ. ಅಂಥವರಿಗೆ ವಿಟಮಿನ್ ಕೆ 10-20 ಮಿ.ಗ್ರಾಂ. ನಷ್ಟು ಚುಚ್ಚು ಮದ್ದಿನ ಮೂಲಕ ನೀಡ ಬೇಕಾಗುತ್ತದೆ.

ವಿಟಮಿನ್ ಕೆ ದೊರೆಯುವ ಆಹಾರಾಂಶಗಳು ಪ್ರತಿ 100 ಗ್ರಾಂಗಳಲ್ಲಿ

  • ಪಾಲಕ್ ಸೊಪ್ಪು-420 ಮೈಕ್ರೋಗ್ರಾಂ
  • ಕ್ಯಾಬೇಜ್ -130 ಮೈಕ್ರೋಗ್ರಾಂ
  • ಬ್ರಾಹ್ಮೀ ಎಲೆ -60 ಮೈಕ್ರೋಗ್ರಾಂ

ಎಚ್ಚರಿಕೆ

ವಿಟಮಿನ್ ಕೆ ಅಧಿಕವಾಗಿ ಸೇವನೆ ಮಾಡಿದರೆ ಮೂತ್ರಜನಕಾಂಗಗಳಲ್ಲಿ ತೊಂದರೆ ಉಂಟಾಗುತ್ತದೆ. ಜಾಂಡೀಸ್, ರಕ್ತ ಹೀನತೆಗೆಗಳು ತಲೆದೋರಬಹುದು. ಇದು ಮಕ್ಕಳಿಗೆ ಎದೆಹಾಲಿನ ಮೂಲಕವೇ ದೊರೆಯಬೇಕು. ಮನುಷ್ಯನ ಕರುಳಿನಲ್ಲೇ ಬ್ಯಾಕ್ಟೀರಿಯಾಗಳಿಂದ ವಿಟಮಿನ್ ಕೆ ತಯಾರಾಗುತ್ತದೆ.

ಇನ್ನಿತರೆ

ಹೂಕೋಸು, ಎಲೆ ಕೋಸು, ಹಸಿರು ಸೊಪ್ಪುಗಳಿಗೆ ಹೋಲೊಸಿದರೆ ಪ್ರಾಣೀಜನ್ಯ ಆಹಾರಗಳಲ್ಲಿ ಇದು ಕಡಿಮೆ ದೊರೆಯುತ್ತದೆ.

Leave a Reply

Your email address will not be published. Required fields are marked *

Trending

Exit mobile version