ದಿನದ ಸುದ್ದಿ
ದಾವಣಗೆರೆ ನುಡಿಜಾತ್ರೆ; ಕನ್ನಡ ಹಬ್ಬ | ಜ. 23ಕ್ಕೆ ಸಮೂಹ ನೃತ್ಯ ಸರ್ಧೆ
ಸುದ್ದಿದಿನ, ದಾವಣಗೆರೆ : ನಗರದ ಕುವೆಂಪು ಕನ್ನಡಭವನದಲ್ಲಿ ಜ.23, ಮಧ್ಯಾಹ್ನ 2 ಕ್ಕೆ ವಿಜಯಕರ್ನಾಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ವಿಕ ಕನ್ನಡ ಹಬ್ಬ, ಹರಿಹರ-ದಾವಣಗೆರೆ ನುಡಿ ಜಾತ್ರೆ ಹಮ್ಮಿಕೊಂಡಿದ್ದು, ಈ ನಿಮಿತ್ತ ಸಮೂಹ ನೃತ್ಯ ಸ್ಪರ್ಧೆ ಏರ್ಪಡಿಸಿದೆ.
ಒಂದು ತಂಡದಲ್ಲಿ ಕನಿಷ್ಠ 5ರಿಂದ ಗರಿಷ್ಠ 10 ಕಲಾವಿದರು ಇರಬೇಕು. ಕನ್ನಡ ಭಾಷೆ ಹಾಡಿಗೆ ಮಾತ್ರ ಅವಕಾಶ, ಜನಪದ ನೃತ್ಯ, ಕನ್ನಡ ನಾಡು ನುಡಿ ಚಲನಚಿತ್ರಗೀತೆ, ಯಾವುದೇ ಕಲಾಪ್ರಕಾರಗಳ ಸಮೂಹ ನೃತ್ಯಕ್ಕೆ ಅವಕಾಶವಿದೆ. ಒಂದು ತಂಡದಲ್ಲಿ ಇದ್ದ ಕಲಾವಿದರು ಇನ್ನೊಂದು ತಂಡದಲ್ಲಿ ಭಾಗವಹಿಸುವಂತಿಲ್ಲ. ಸುಸಜ್ಜಿತ ವೇದಿಕೆ, ಧ್ವನಿರ್ವಧಕವನ್ನು ಸಂಸ್ಥೆ ಆಯೋಜಿಸುತ್ತದೆ.
ಇನ್ನುಳಿದಂತೆ ನೃತ್ಯ ಪರಿಕರ, ಹಾಡು, ಪೆನ್‌ಡ್ರೈವ್ ಸೇರಿದಂತೆ ಹಾಡಿಗೆ ಬೇಕಾದ ಎಲ್ಲ ಸಲಕರಣಿಗಳನ್ನು ಸ್ಪರ್ಧಾಳುಗಳೇ ತರಬೇಕು. ಆಯ್ದ ಮೂರು ತಂಡಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗುತ್ತದೆ.
ಆಸಕ್ತ ತಂಡಗಳು -ನಂದೀಶ್ ಭದ್ರಾವತಿ 9113614148, ಯಳನಾಡು ಮಂಜು 9880652193 ಇವರಲ್ಲಿ ಹೆಸರನ್ನು ನೋಂದಾಯಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243