ದಿನದ ಸುದ್ದಿ
ಜಿಯೋಗೆ ಸೆಡ್ಡು ಹೊಡೆಯಲು ವೊಡಾಫೋನ್ ರೆಡಿ: ಗ್ರಾಹಕರಿಗೆ ಸಿಗಲಿವೆ ಈ ಆಫರ್ !
ಸುದ್ದಿದಿನ ಡೆಸ್ಕ್ | ಜಿಯೋಗೆ ಸೆಡ್ಡು ಹೊಡೆಯಲು ವೊಡಾಫೋನ್ ಕಂಪನಿ ಸಿದ್ಧತೆ ನಡೆಸಿದೆ. ಜನಪ್ರಿಯ ಆಫರ್ ಗಳ ಮೂಲಕ ಜಿಯೋ ಕಂಪನಿ ಟೆಲಿಕಾಂ ಕ್ಷೇತ್ರದಲ್ಲಿ ತನ್ನ ವಿಸ್ತಾರ ಹೆಚ್ಚಿಸಿಕೊಂಡಿತ್ತು. ಈಗ ಅದಕ್ಕೆ ಸವಾಲು ನೀಡುವ ಮಾದರಿಯಲ್ಲಿ ವೊಡಾಫೋನ್ ಕಂಪನಿ ಹೊಸ ಆಫರ್ ಗಳನ್ನು ಪ್ರಕಟಿಸಿದೆ.
ಪ್ರಪಂಚದ ಖ್ಯಾತ ಟೆಲಿಕಾಂ ಕಂಪನಿ ಎಂದು ಹೆಸರು ಮಾಡಿರುವ ವೊಡಾಫೋನ್ ಸಂಸ್ಥೆ ಭಾರತದಲ್ಲಿ ರೂ.209, ರೂ.479 ಮತ್ತು ರೂ.529ರ ಮೂರು ಹೊಸ ಪ್ಲಾನ್ ಪ್ರಕಟಿಸಿದ್ದು, ಗ್ರಾಹಕರ ಗಮನ ಸೆಳೆಯುವ ಪ್ರಯತ್ನ ನಡೆಸಿದೆ. 209 ರೂಪಾಯಿ ರ ಮೊದಲ ಪ್ಲಾನ್ ನಲ್ಲಿ ಗ್ರಾಹಕರಿಗೆ ನಿತ್ಯ 1.5ಜಿಬಿ ಡೇಟಾ ಸಿಗಲಿದೆ. ಇದು 28 ದಿನಗಳ ವರೆಗೆ ವ್ಯಾಲಿಡಿಟಿ ಹೊಂದಿದೆ.
479 ರೂಪಾಯಿ ಪ್ಲಾನ್ ನಲ್ಲಿ 84 ದಿನಗಳ ಅವಧಿಗೆ ನಿತ್ಯ 1.5ಜಿಬಿ ಡೇಟಾ ಮತ್ತು ರೂ.529ರ ಪ್ಲಾನ್ ನಲ್ಲಿ 90ದಿನಗಳ ಅವಧಿಗೆ 1.5ಜಿಬಿ ಡೇಟಾ ಸಿಗಲಿದೆ. ಇವುಗಳ ಜತೆಗೆ ವಾರಕ್ಕೆ 1000 ನಿಮಿಷ ಉಚಿತ ಕರೆ, ನಿತ್ಯ 100ಎಸ್.ಎಂ.ಎಸ್ ಗಳು ಸಿಗಲಿವೆ.