ದಿನದ ಸುದ್ದಿ

ಮತದಾನ ಮೂಲಕ ಭಾರತಾಂಭೆ ಋಣ ತೀರಿಸಿ : ವೀರೇಂದ್ರ ಹೆಗ್ಗಡೆ

Published

on

ಸುದ್ದಿದಿನ,ಮೈಸೂರು: ದೇಶವನ್ನು ತಾಯಿಯ ರೀತಿ ನೋಡಬೇಕು, ತಾಯಿ ನಮ್ಮನ್ನು ಸಾಕಿ ಸಲಿದು ಪೋಷಣೆ ಮಾಡಿ ಶಿಕ್ಷಣ ನೀಡುತ್ತಾಳೆ ಹಾಗಾಗಿ ತಾಯಿ ಋಣ ತೀರಿಸಲು ತಾಯಿ ಸೇವೆ ಮಾಡಬೇಕು. ಭಾರತಾಂಭೆಯ ಋಣ ನಮ್ಮ ಮೇಲಿದೆ ಅದನ್ನು ತೀರಿಸಲು ಮತ ಚಲಾಯಿಸಬೇಕು. ಉದಾಸಿನ ಅಲಸ್ಯದಿಂದ ಮತದಾನದ ಹಕ್ಕಿನಿಂದ ವಂಚಿತರಾದರೆ ತಾಯಿ ಸೇವೆಯಿಂದ ವಂಚಿತರಾದ ಹಾಗೇ ಉತ್ತಮ ಸರ್ಕಾರ ರಚನೆಯಾಗಲು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಎಂ.ಎಂ.ಕೆ.ಮತ್ತು ಎಸ್.ಡಿ.ಎಂ. ಮಹಿಳಾ ಮಹಾವಿದ್ಯಾಲಯದ ಎನ್.ಎಸ್.ಎಸ್, ವೈ.ಆರ್.ಸಿ ರೇಂಜರ್ಸ್ ಘಟಕಗಳು ಹಾಗೂ ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಮೊದಲ ಬಾರಿಗೆ ಚುನಾವಣೆಯಲ್ಲಿ ಮತದಾನ ಮಾಡುವ ವಿದ್ಯಾರ್ಥಿನಿಯರಿಗೆ ಅಭಿನಂದನೆ ತಿಳಿದರು. ನಿಮ್ಮ ನೆರೆಹೊರೆಯವರಿಗೂ ಮತದಾನ ಮಾಡುವಂತೆ ತಿಳಿಸಿ ಹಾಗೂ ದೇಶ,ಸಮಾಜ ಹಾಗೂ ಹಳ್ಳಿಗಳ ಸುಧಾರಣೆಗೆ ಒಳ್ಳೆಯ ವ್ಯಕ್ತಿಗಳನ್ನು ಹಾರಿಸಿ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿ. ಕೆ ಅವರು ಮಾತನಾಡಿ ಚುನಾವಣೆ ಆಯೋಗದ ನಿರ್ದೇಶನದಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮಗೆ ಸಂಘ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಹಾಸ್ಟಲ್ ವಿದ್ಯಾರ್ಥಿಗಳು ಜಾಗೃತಿಗೆ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಕಡ್ಡಾಯವಾಗಿ ನಿರ್ಭೀತಿಯಿಂದ ನೈತಿಕವಾದ ಮತದಾನ ಮಾಡಿ ನಿಮ್ಮ ಮನೆಯ ಅಕ್ಕ ಪಕ್ಕದವರನ್ನು ಮತದಾನ ಮಾಡುವಂತೆ ಪ್ರೆರೇಪಿಸಿ ಎಂದು ಅವರು ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ವಿದ್ಯಾರ್ಥಿಗಳಿಗೆ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಜಾಥಾವು ಎಸ್.ಡಿ.ಎಂ ಕಾಲೇಜಿನಿಂದ ಹೋರಟು ಆರ್.ಟಿ.ಒ ವೃತ್ತ, ನ್ಯಾಯಾಲಯ, ಅಶೋಕ ವೃತ್ತದ ಮೂಲಕ ಸಾಗಿತು ಈ ವೇಳೆ ವಿದ್ಯಾರ್ಥಿನಿಯರು ಮತದಾನದ ಪೋಸ್ಟರ್‍ಗಳನ್ನು ಹಿಡಿದು ವೋಟ್ ಪಾರ್ ಇಂಡಿಯಾ ಹಾಗೂ ತಪ್ಪದೇ ಮತದಾನ ಮಾಡಿ, ನೈತಿಕ ಚುನಾವಣೆ ಬೆಂಬಲಿಸಿ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಶಿವನಂದಾ ಮೂರ್ತಿ, ಎಂ.ಎಂ.ಕೆ. ಮತ್ತು ಎಸ್.ಡಿ.ಎಂ. ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಸಾಯಿನಾಥ್ ಮಲ್ಲಿಗೆಮಾಡು, ಪ್ರಾಂಶುಪಾಲರಾದ ಎಂ.ವಿ. ಆಶಾ ಹಾಗೂ ಇನ್ನಿತರರು ಅಧಿಕಾರಿಗಳು ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version