ರಾಜಕೀಯ

ಮತದಾನ ಜಾಗೃತಿಗೆ ‘ವೋಟ್ ಇಂಡಿಯಾ’ ಹಾಡು

Published

on

ಸುದ್ದಿದಿನ,ಮೈಸೂರು : ವಿಶೇಷವಾಗಿ ಯುವಕರನ್ನು ಸೆಳೆದು ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲು ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸುವ ಚಿಂತನೆಯೊಂದಿಗೆ ಜಾಗೃತಿ ಮೂಡಿಸಲು ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ‘ವೋಟ್ ಇಂಡಿಯಾ’ ಎಂಬ ವೀಡಿಯೋ ಹಾಡನ್ನು ಪ್ರಸ್ತುತ ಪಡಿಸಿದ್ದು, ಶನಿವಾರ ಅರಮನೆ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.

ಸ್ವೀಪ್ ಕಾರ್ಯಕ್ರಮದ ಐಕಾನ್ ಆಗಿರುವ ಸರಿಗಮಪ ಖ್ಯಾತಿಯ ಗಾಯಕ ಶ್ರೀಹರ್ಷ ಅವರು ರಚಿಸಿ, ನಿರ್ದೇಶಿಸಿರುವ ಈ ವೀಡಿಯೋ ಗೀತೆಯನ್ನು ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಜ್ಯೋತಿ ಅವರು ಬಿಡುಗಡೆಗೊಳಿಸಿದರು.

ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ಸಂದೇಶವನ್ನು ಈ ಗೀತೆ ಸಾರುತ್ತದೆ.

ಹೊಸ ರೀತಿಯಲ್ಲಿ ಜನರನ್ನು ಈ ಹಾಡು ತಲುಪಲಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಜನರನ್ನು ತಲುಪಲಿದೆ. ಸರಳವಾದ ನೃತ್ಯವನ್ನು ಒಳಗೊಂಡಿದೆ.
ಈ ಗೀತೆಯ ನಂತರ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹಾಗೂ ಜಿಲ್ಲಾ ಪಂಚಾಯಿತಿ ಸಿ.ಇ.ಒ. ಕೆ. ಜ್ಯೋತಿಯ ಅವರ ಸಂದೇಶವೂ ಸಹ ಪ್ರಸಾರವಾಗುತ್ತದೆ.

ಯುವ ಸಮೂಹ ಹಾಗೂ ವಿದ್ಯಾರ್ಥಿಗಳು ವೋಟ್ ಇಂಡಿಯಾ ಹಾಡನ್ನು ಅದೇ ರಾಗದಲ್ಲಿ ವಿವಿಧ ರೀತಿಯ ಮೊಬೈಲ್ ಆ್ಯಪ್ ಗಳಾದ ಟಿಕ್ ಟಾಕ್, ಲೈಕ್ ಆ್ಯಪ್ ಹಾಗೂ ಡಬ್ಸ್ ಸ್ಮ್ಯಾಸ್ ಮೂಲಕ ಪ್ರಯೋಗಗಳನ್ನು ಮಾಡಬಹುದು. ಇದರಿಂದ ಹೆಚ್ಚು ಜನರನ್ನು ತಲುಪಬಹುದು.

ಹೆಚ್ಚು ವೀಕ್ಷಕರನ್ನು ಸೆಳೆಯಲು ಯೂಟೂಬ್ ಲಿಂಕ್ ಮೂಲಕ ವೋಟ್ ಇಂಡಿಯಾ ಹಾಡನ್ನು ಹೆಚ್ಚು ವೈರಲ್ ಮಾಡಲಾಗುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version