ರಾಜಕೀಯ
ಹೂಗಳ ಮೂಲಕ ಮತದಾನ ಜಾಗೃತಿ ; ವಿಶಿಷ್ಟ ಪ್ರಯೋಗ
ಸುದ್ದಿದಿನ,ಹುಬ್ಬಳ್ಳಿ : ಭಾರತದ ನಾಗರಿಕರಾಗಿರದ್ದು, ಹದಿನೆಂಟು ವರ್ಷ ತುಂಬಿದ ಎಲ್ಲಾ ಯುವಕ ಯುವತಿಯರು ತಪ್ಪದೇ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಹೇಳಿದರು.
ನಗರದ ಇಂದಿರಾ ಗಾಜಿನ ಮನೆಯಲ್ಲಿ ಚುನಾವಣಾ ಆಯೋಗ, ಜಿಲ್ಲಾ ಆಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತೋಟಗಾರಿಕೆ ಇಲಾಖೆ ಸಹೋಗದಲ್ಲಿ ಮೂರು ದಿನಗಳ ಕಾಲ ಮತದಾನದ ಜಾಗೃತಿಗಾಗಿ ಆಯೋಜಿಸಲಾಗಿರುವ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಏಪ್ರಿಲ್ 23ರ ಮಂಗಳವಾರದಂದು ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ಜರುಗಲಿದೆ. ಅಂದು ಸರ್ಕಾರಿ ರಜಾ ದಿನವಾದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೋಳ್ಳಬೇಕು. 18 ವರ್ಷ ತುಂಬಿದ ಯುವಕರಿಂದ ಈಗಾಗಲೇ ಫಾರಂ ನಂ 6 ನಲ್ಲಿ ಮತದಾರರ ಪಟ್ಟಿಯ ನೋಂದಣಿ ಅರ್ಜಿಗಳನ್ನು ಸ್ವೀಕರಿಸಿ, ಅರ್ಹರಿಗೆ ಮತದಾರರ ಗುರುತಿನ ಚೀಟಿಯನ್ನು ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತ್ರಿ ಪಡಿಸಿಕೊಳ್ಳಲು ಚುನಾವಣಾ ಆಯೋಗದ ವೆಬ್ ಸೈಟ್ ಅಥವಾ ಆ್ಯಪ್, ಇಲ್ಲವೇ ಉಚಿತ ದೂರವಾಣಿ ಸಂಖ್ಯೆ 1950 ಕರೆ ಮಾಡಬಹುದು.
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳು ಜರುಗದಂತೆ ತಡೆಯುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಚುನಾವಣಾ ಅಕ್ರಮಗಳು ಕಂಡುಬಂದರೆ, ಅಂತಹ ಘಟನೆಯ ಫೋಟೊ ಹಾಗೂ ವಿಡಿಯೋಗಳನ್ನು ಚಿತ್ರಿಕರಿಸಿ ಸಿ ವಿಜನ್ ವೆಬ್ಸೈಟ್ ಮೂಲಕ ದೂರು ಸಲ್ಲಿಸಬಹುದು.
ಮತದಾನ ನಮ್ಮೆಲ್ಲರ ಹಕ್ಕು. ಮತ ಚಲಾಯಿಸುವುದರ ಮೂಲಕ ನಮ್ಮ ಕರ್ತವ್ಯ ನಿಭಾಯಿಸಿ ದೇಶ ಭಕ್ತಿ ಹಾಗೂ ಪ್ರೇಮವನ್ನು ಎಲ್ಲರೂ ತೊರಿಸಬೇಕು. ಈ ಬಾರಿ ಪ್ರಥಮ ಬಾರಿ ಮತ ಚಲಾಯಿಸುವ ಯುವಕ ಯುವತಿಯರಿಗೆ ಸೆಲ್ಫಿ ಕಾಂಟೆಸ್ಟ್ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಯುವಕ ಯುವತಿಯರು ಮತದಾನ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಹೂಗಳಲ್ಲಿ ಅರಳಲಿದ ಕರ್ನಾಟಕ ನಕ್ಷೆ, ಬ್ಯಾಲೆಟ್ ಹಾಗೂ ವಿವಿ ಪ್ಯಾಡ್
ಕಾರ್ನೇಶನ್, ರೋಜ್ ಸೇರಿದಂತೆ ವಿವಿಧ ಹೂಗಳಿಂದ ನಿರ್ಮಿಸಲಾದ ಕರ್ನಾಟಕದ ನಕ್ಷೆ, ಬ್ಯಾಲೆಟ್ ಹಾಗೂ ವಿವಿಪ್ಯಾಟ್ ಸುಂದರವಾಗಿ ಮೂಡಿ ಬಂದುದ್ದು, ಯುವಕ, ಯುವತಿಯರು ಹಾಗೂ ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಯುವಕ, ಯುವತಿಯರು ಇವುಗಳ ಮುಂದೆ ಮತದಾನ ಜಾಗೃತಿಯ ಫಲಕಗಳನ್ನು ಹಿಡಿದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಮೂರು ದಿನಗಳ ಕಾಲ ಪ್ರದರ್ಶನಕ್ಕೆವನ್ನು ಏರ್ಪಡಿಸಲಾಗಿದೆ. ಹೂಗಳ ಬಾಡದೆ ಇದ್ದರೆ ನಾಲ್ಕನೆಯ ದಿನವೂ ಪ್ರದರ್ಶನ ಮುಂದುವರಿಸಲಾಗುವುದು. ಈ ಅವಧಿಯಲ್ಲಿ ಇಂದಿರಾ ಗಾಜಿನ ಮನೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಓ ಡಾ.ಬಿ.ಸಿ. ಸತೀಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಯುವಕರಿಗೆ ಮತದಾನದ ಕುರಿತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಅಣಕು ಮತದಾನ ಮಾಡಿದ ಯುವಕರು, ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ಮತದಾನ ಮಾಡುವ ಕುರಿತಾಗಿರುವ ಇರುವ ಗೊಂದಲ ಹಾಗೂ ಸಂದೇಹಗಳು ಕೇಳಿ ಪರಿಹರಿಸಿಕೊಂಡರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಮಚಂದ್ರ ಮಡಿವಾಳ, ಹುಬ್ಬಳ್ಳಿ ತಹಶೀಲದಾರ ಶಶಿಧರ ಮಾಡ್ಯಳ, ತಾ.ಪಂ. ಇಓ ಎಂ.ಎಂ.ಸವದತ್ತಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ, ಪ್ಯಾರಾ ಶೂಟರ್ ಜ್ಯೋತಿ ಸಣ್ಣಹಕ್ಕಿ, ಸೇರಿದಂತೆ ಇತರೆ ತಾಲೂಕು ಮಟ್ಟದ ಅಧಿಕಾರಿಗಳು, ಪದವಿ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತಿರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401