ದಿನದ ಸುದ್ದಿ
ಬಿಗಿಭದ್ರತೆಯೊಂದಿಗೆ ಮತದಾನ ಆರಂಭ
ಸುದ್ದಿದಿನ ಡೆಸ್ಕ್ : ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಎಲ್ಲಾ ಕ್ಷೇತ್ರಗಳಲ್ಲಿ ಬಿಗಿಭದ್ರತೆಯಲ್ಲಿ ಈಗಷ್ಟೆ ಆರಂಭವಾಗುತ್ತಿದೆ. ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ.
ಮತದಾನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಜಾಗ್ರತಾ ಕ್ರಮವಾಗಿ ಆಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ. ಮತಗಟ್ಟೆಯ ಸುತ್ತಮುತ್ತ ಅಗತ್ಯ ಪೊಲೀಸ್ ಸಿಬ್ಬಂದಿ ಹಾಗೂ ಅರೆಸೇನಾ ಯೋಧರ ಪಡೆಗಳನ್ನು ನಿಯೋಜಿಸಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸುಗಮ ಮತದಾನಕ್ಕೆ ಅನುಕೂಲವಾಗುವಂತೆ 58 ಸಾವಿರದ 545 ಮತಗಟ್ಟೆಗಳನ್ನು ರಾಜ್ಯಾದ್ಯಂತ ತೆರೆಯಲಾಗಿದೆ.
ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು 2 ಲಕ್ಷ 56 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇದರ ಜೊತೆಗೆ ಹೋಮ್ ಗಾರ್ಡ್ಸ್, ಅರಸೇನಾಪಡೆಗಳು ಹಾಗೂ 650 ಸಿಎಪಿಎಫ್ ಕಂಪನಿ,101 ಸಿಆರ್‌ಪಿಎಫ್ ಬೆಟಾಲಿಯನ್, 108 ಬಿಎಸ್‌ಎಫ್ ಪಡೆಗಳು, ೭೫ ಸಿಐಎಸ್‌ಎಫ್ ತುಕಡಿ, 70 ಐಟಿಬಿಪಿ ಪೊಲೀಸ್ ಪಡೆ, 35 ಆರ್‌ಎಎಫ್ ತಂಡ ಮತ್ತು 186 ಎಸ್‌ಎಪಿ ಕಂಪನಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243