ದಿನದ ಸುದ್ದಿ

ಅಮೆರಿಕದಲ್ಲಿ ಐವರು ಪತ್ರಕರ್ತರ ಎದೆಗೆ ಗುಂಡು

ವಾಷಿಂಗ್ಟನ್‍ನ ಐತಿಹಾಸಿಕ ನಗರಿ ಅನ್ನಾಪೊಲೀಸ್‍ನಲ್ಲಿರುವ ಕ್ಯಾಪಿಟಲ್ ಗೆಜೆಟ್ ಎಂಬ ಪತ್ರಿಕಾ ಕಚೇರಿಗೆ ನುಗ್ಗಿರುವ ಬಂಧೂಕುದಾರಿಯೊಬ್ಬ ಐವರು ಪತ್ರಕರ್ತರನು ಗುಂಡಿಟ್ಟು ಹತಗೈದಿದ್ದಾನೆ.

Published

on

ಸುದ್ದಿದಿನ ಡೆಸ್ಕ್: ವಾಷಿಂಗ್ಟನ್‍ನ ಐತಿಹಾಸಿಕ ನಗರಿ ಅನ್ನಾಪೊಲೀಸ್‍ನಲ್ಲಿರುವ ಕ್ಯಾಪಿಟಲ್ ಗೆಜೆಟ್ ಎಂಬ ಪತ್ರಿಕಾ ಕಚೇರಿಗೆ ನುಗ್ಗಿರುವ ಬಂಧೂಕುದಾರಿಯೊಬ್ಬ ಐವರು ಪತ್ರಕರ್ತರನು ಗುಂಡಿಟ್ಟು ಹತಗೈದಿದ್ದು, ಇದಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ.
ಘಟನೆ ಸಂಬಂಧ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆತ ಯಾವುದೇ ವಿಷಯವನ್ನು ಬಾಯ್ಬಿಡುತ್ತಿಲ್ಲ ಎಂದು ತಿಳಿದುಬಂದಿದೆ.
ಕಚೇರಿಯಲ್ಲಿ ಯಾವುದೋ ಕೆಲಸ ಇದೆ ಎಂದು ಹೇಳಿಕೊಂಡು ಒಳಗೆ ಬಂದ ಆಗಂತುಕನು ಗಾಜಿನ ಬಾಗಿಲನ್ನು ಒದ್ದು, ಸಿಬ್ಬಂದಿ ಮೇಲೆ ಹಟಾತ್ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
“ಆತ ಬಂದಾಗ ಎಲ್ಲರೂ ಡೆಸ್ಕ್‍ನಲ್ಲಿ ತಂಪಾಡಿಗೆ ತಾವು ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ತನ್ನ ಬಳಿ ಇದ್ದ ಆಟೊಮ್ಯಾಟಿಕ್ ಗನ್ ತೆಗೆದ ಆತ, ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾನೆ,’ ಎಂದು ತಿಳಿದುಬಂದಿದೆ.
ಕ್ಯಾಪಿಟಲ್ ಗೆಜೆಟ್ ಸಂಪಾದಕ ಜಿಮ್ಮಿ ಡಿಬಟ್ಸ್ ಅವರು ವಿಷಯ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ವಿಷಯ ಕೇಳಿ ನನ್ನ ಎದೆ ಹೊಡೆದುಹೋಯಿತು. ಪತ್ರಕರ್ತರನ್ನು ಉದ್ದೇಶಪೂರಕವಾಗಿ ಗುರಿಯಾಗಿಸಿಕೊಂಡು ಆತ ದಾಳಿ ನಡೆಸಿದ್ದಾನೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. 2015ರಲ್ಲಿ ವರ್ಜಿನಿಯಾದಲ್ಲಿ ನೇರ ಪ್ರಸಾರ ಮಾಡುತ್ತಿದ್ದ ಇಬ್ಬರು ಪತ್ರಕರ್ತರನ್ನು ಕೊಂದ ಘಟನೆಯನ್ನು ಇದು ನೆನಪಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಈ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬದವರ ನೋವಿನಲ್ಲಿ ನಾನೂ ಕೂಡ ಭಾಗಿ. ತಪ್ಪಿತಸ್ತರಿಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version