ದಿನದ ಸುದ್ದಿ
ಕೀಕಿ ಡ್ಯಾನ್ಸ್ ಆಯ್ತು ಈಗ ‘ಡ್ರ್ಯಾಗನ್ ಬ್ರೆತ್’ ಚಾಲೆಂಜ್ ವಿಡಿಯೊ ನೋಡಿ..!
ಸುದ್ದಿದಿನ ಡೆಸ್ಕ್ | ಈಗಾಗಲೇ ಹವಾ ಸೃಷ್ಟಿಸಿರುವ ಕಿಕಿ ಡ್ಯಾನ್ಸ್ ಬೆನ್ನ ಹಿಂದೆಯೇ ಮತ್ತೊಂದು ಮಾರಣಾಂತಿಕ ಸವಾಲು ಫೇಸ್ ಬುಕ್ ನಲ್ಲಿ ವೈರಲ್ ಆಗುತ್ತಿದೆ.
ಮಂಜುಗಡ್ಡೆಯನ್ನು ದ್ರವ ರೂಪದ ನೈಟ್ರೋಜನ್ ನಲ್ಲಿ ಅದ್ದಿ ಅದನ್ನು ಒಮ್ಮೆಗೆ ತಿನ್ನುವುದೇ ಸವಾಲು. ಹೀಗೆ ಬಾಯಿಗೆ ಇಟ್ಟ ಕೂಡಲೇ ಹೊಗೆ ಬರುತ್ತದೆ. ಹಾಗಾಗಿಯೇ ಡ್ರಾಗನ್ ಬ್ರೆತ್ ಹೆಸರಿಡಲಾಗಿದೆ.
ಅಮೆರಿಕ, ಬ್ರಿಟನ್ ಮೊದಲಾದ ದೇಶಗಳಲ್ಲಿ ಈ ರೀತಿ ಡ್ರ್ಯಾಗನ್ ಬ್ರೆತ್ ಚಾಲೆಂಜ್ ಸ್ವೀಕರಿಸಿ ವಿಡಿಯೊ ಅಪ್ ಲೋಡ್ ಮಾಡಲಾಗುತ್ತಿದೆ. ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಇದೊಂದು ಅಪಾಯಕಾರಿ ಸವಾಲು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿ ಇದನ್ನು ಬ್ಯಾನ್ ಮಾಡಿದೆ.
ನೈಟ್ರೊಜನ್ ಮೈಗೆ ಸೋಕಿದರೆ ಸೋಂಕು ಉಂಟಾಗುತ್ತದೆ. ಅದನ್ನು ಬಾಯೊಳಗೆ ಹಾಕಿದಾಗ ಶ್ವಾಸಕೋಶಕ್ಕೆ ತೊಂದರೆಯಾಗುತ್ತದೆ ಎಂದ ಇಲಾಖೆ ತನ್ನ ಆದೇಶದಲ್ಲಿ ಹೇಳಿದೆ.
ಲಂಡನ್ ನಲ್ಲಿ ಯುವಕನೊಬ್ಬ ಡ್ರಾಗನ್ ಚಾಲೆಂಜ್ ಸ್ವೀಕರಿಸಿ ಆಸ್ಪತ್ರೆ ಸೇರಿದ್ದಾನೆ. ಕಳೆದ ವರ್ಷ್ ಗುರುಗಾಂವ್ ನಲ್ಲಿ ಯುವಕನೊಬ್ಬನ ಹೊಟ್ಟೆಯಿಂದ ಆಪರೇಷನ್ ಮೂಲಕ ಕ್ಯಾಂಡಿಗಳನ್ನು ತೆಗೆಯಲಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9985715401