ದಿನದ ಸುದ್ದಿ

ಕಬಿನಿಯ ಒಡಲಲ್ಲಿ ಧುಮ್ಮಿಕ್ಕಿದ ಜಲಧಾರೆ

Published

on

ಸುದ್ದಿದಿನ ಡೆಸ್ಕ್ | ಕಪಿಲಾ ಎಂದೂ ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು. ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ, ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಮೈಸೂರು ಜಿಲ್ಲೆಯ ಹೆಗ್ಗದದೇವನ ಕೋಟೆ ಗ್ರಾಮಗಳಾದ ಬಿಚ್ಚನಹಳ್ಳಿಯ ಮತ್ತು ಬಿದರಹಳ್ಳಿಯ ನಡುವೆ ಕಾಡು ನದಿಗಳನ್ನು ಒಳಗೊಂಡ ಪ್ರದೇಶದಲ್ಲಿ 1974 ರಲ್ಲಿ ಹತ್ತಿರ ಬೃಹತ್ ಕಬಿನಿ ಆಣೆಕಟ್ಟಿನಲ್ಲಿ ಅದರ ನೀರು ಸಂಗ್ರಹಿಸಬೇಕೆಂದು 696 ಮೀಟರ್ ಉದ್ದದ ಹಣಕಟ್ಟೆ ಕಬಿನಿ ನದಿಗೆ ನಿರ್ಮಿಸಲಾಗಿದೆ.

ಈ ನದಿಯ ಸುತ್ತಮುತ್ತಲು ಕಾಡು ಬೆಟ್ಟಗಳ ನಡುವೆ ಕೂಡಿದ್ದು ನೋಡಲು ಬಲು ಸುಂದರವಾಗಿದೆ. ಬೇಸಿಗೆಯಲ್ಲಿ ಈ ನದಿಯ ಹಿನ್ನೀರಿನಲ್ಲಿ ವಿಶೇಷವಾದ ವನ್ಯಜೀವಿ ಬಹಳ ಹೇರಳವಾಗಿರುತ್ತವೆ. ಸುಮಾರು ಒಂದು ಲಕ್ಷದ ಏಳು ಸಾವಿರ ಕೃಷಿ ಭೂಮಿ ಗಳು ಜಲಶಯವನ್ನೇ ನಂಬಿಕೊಂಡಿವೆ.

ವರ್ಷದ ಮುಂಗಾರು ಆರಂಭದಲ್ಲಿಯೇ ವರುಣ ಕೃಪೆ ತೋರಿದ ಪರಿಣಾಮ ಕಬಿನಿ ಜಲಾಶಯ ತುಂಬಿದೆ. 4 ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡುತ್ತಿರುವುದರಿಂದ ಮನೋಹರವಾಗಿ ಜಲಧಾರೆ ಧುಮ್ಮುಕ್ಕುತ್ತಿದೆ.

ಕಬಿನಿ ಜಲಾಶಯ ಒಳ ಹರಿವು 48000 ಕ್ಯೂಸೆಕ್ ಇದ್ದು, 48000 ರಿಂದ 50000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ ಗೇಟ್‌‌‌ಗಳಿಂದ ನೀರು ಹೊರ ಬಿಡಲಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version