ಲೈಫ್ ಸ್ಟೈಲ್

ಬೇಸಿಗೆಯ ಡಾಕ್ಟರ್ ‘ಕಲ್ಲಂಗಡಿ ಹಣ್ಣಿ’ನ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು..!

Published

on

ಸುದ್ದಿದಿನ ಡೆಸ್ಕ್ : ಬೇಸಿಗೆ ಬಂದಿದೆ ಎಲ್ಲಿ ನೋಡಿದರೂ ಕಲ್ಲಂಗಡಿ ಹಣ್ಣು. ನೋಡಲು ಎಷ್ಟು ಚಂದವೊ ಅಷ್ಟೇ ಆರೋಗ್ಯಕರವಾದ ಹಣ್ಣು. ಬೇಸಿಗೆಯ ಕಾಲದಲ್ಲಿ ಹೆಚ್ಚಾಗಿ ಸಿಗುವ ನಮ್ಮ ಬಾಯಾರಿಕೆಯನ್ನು ನೀಗಿಸುವ ಈ ಕಲ್ಲಂಗಡಿ ಹಣ್ಣಿನಿಂದ ಹಲವು ಉಪಯೋಗಗಳಿವೆ.

ಉಪಯೋಗಗಳು

  1. ಕಲ್ಲಂಗಡಿಯಲ್ಲಿ ಪ್ರತ್ಯಾಮ್ಲಗಳು ಅಧಿಕವಿರುತ್ತದೆ. ಇದು ದೇಹಕ್ಕೆ ಹಾನಿಯುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
  2. ಕಲ್ಲಂಗಡಿ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಹೃದಯವನ್ನು ರಕ್ಷಣೆ ಮಾಡುತ್ತದೆ.
  3. ಕಲ್ಲಂಗಡಿಯಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಅಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.
  4. ಬೇಸಿಗೆಯಲ್ಲಿ ನಮ್ಮ ಚರ್ಮದಲ್ಲಿ ಹಾಗೂ ಇಡೀ ದೇಹದಲ್ಲಿ ನೀರು ಕಡಿಮೆ ಆಗುತ್ತದೆ. ಕಲ್ಲಂಗಡಿ ಸೇವನೆಯಿಂದ ಅದು ಸಮತೋಲನದಲ್ಲಿ ಇರುತ್ತದೆ.
  5. ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲೈನ್ ಅಧಿಕವಿದ್ದು ಇದು ದೇಹದಲ್ಲಿ ನಿಟ್ರಿಕ್ ಆಕ್ಸೈಡ್ ಉತ್ಪತ್ತಿಗೆ ಸಹಾಯಮಾಡುತ್ತದೆ. ನಿಟ್ರಿಕ್ ಆಕ್ಸೈಡ್ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
  6. ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರೊಲೈನ್ ಇದ್ದು, ಇದು ದೇಹವನ್ನು ಸೇರಿದಾಗ ಅಮೈನೋ ಆಸಿಡ್ ಆಗಿ ಪರಿವರ್ತನೆಯಾಗುತ್ತದೆ. ಅಮೈನೋ ಆಸಿಡ್ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ.
  7. ಕಲ್ಲಂಗಡಿಯಲ್ಲಿ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ತಡೆಯುತ್ತದೆ.
  8. ಕಲ್ಲಂಗಡಿಯಲ್ಲಿ ಕಬ್ಬಿಣದಂಶ, ಮ್ಯಾಗ್ನಿಷ್ಯಿಯಂ, ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಐಯೋಡಿನ್ ಇರುವುದರಿಂದ ಮೂಳೆಗಳನ್ನು ಬಲವಾಗಿಸುತ್ತದೆ. ಇದರಿಂದ ಸಂಧಿ ನೋವು ಉಂಟಾಗುವುದಿಲ್ಲ.
  9. ಕಲ್ಲಂಗಡಿಯಲ್ಲಿ ಫಾಲಿಕ್ ಆಸಿಡ್ ಅಧಿಕವಿರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರವಾಗಿದೆ. ಅಲ್ಲದೆ ಇದರಲ್ಲಿ ಖನಿಜಾಂಶಗಳು ಇರುವುದರಿಂದ ಪೋಷಕಾಂಶಾದ ಕೊರತೆ ಉಂಟಾಗುವುದಿಲ್ಲ.
  10. ಕಾಲು ಊದುವ ಸಮಸ್ಯೆ ಇರುವವರಿಗೆ ಪ್ರತೀದಿನ ಒಂದು ಕಲ್ಲಂಗಡಿ ಹಣ್ಣನ್ನು ತಿಂದರೆ ಸಾಕು ಈ ಸಮಸ್ಯೆ ಕಡಿಮೆಯಾಗುವುದು.
  11. ದೇಹದ ತೂಕ ಹೆಚ್ಚಾಗಿದೆ ಎಂಬುವರು ಇದನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು.
  12. ಮಧುಮೇಹ ರೋಗಿಗಳಿಗೆ ಇದು ತುಂಬ ಉಪಯುಕ್ತ ಹಣ್ಣು.
  13. ಕಲ್ಲಂಗಡಿ ಬೀಜಗಳಿಂದ ವಸಡಿನಲ್ಲಿ ಬರುವ ರಕ್ತದ ಸಮಸ್ಯೆಗೆ ಪರಿಹಾರ ಕಾಣಬಹುದು. ಕೂದಲು ಉದುರುವುದು, ತಲೆಹೂಟ್ಟಿನ ಸಮಸ್ಯೆಗೂ ಪರಿಹಾರ ಸಿಗುತ್ತದೆ.
  14. ಕಲ್ಲಂಗಡಿಯಲ್ಲಿ ಹೆಚ್ಚಾಗಿ ನೀರು ಹಾಗೂ ಫೈಬರ್ ಅಂಶ ಇರುವ ಕಾರಣ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
  15. ಕಲ್ಲಂಗಡಿ ರಸ ಮತ್ತು ಮಜ್ಜಿಗೆ ಸೇರಿಸಿ ಸೇವಿಸುವುದರಿಂದ ಉರಿಮೂತ್ರ ಕಡಿಮೆ ಆಗುತ್ತದೆ.

ಇದನ್ನೂ ಓದಿ

https://suddidina.com/lifestyle/health-benefits-of-tulsi/

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version