ರಾಜಕೀಯ
ಅಂಬೇಡ್ಕರ್-ಕಾನ್ಶಿರಾಂ ಆಸೆ ಪೂರೈಸಲು ನಾವು ಒಂದಾಗಿದ್ದೇವೆ : ಪವನ್ ಕಲ್ಯಾಣ್
ಸುದ್ದಿದಿನ ಡೆಸ್ಕ್ : ದಾದಾಸಾಹೇಬ್ ಕಾನ್ಶಿರಾಮರ ಜನ್ಮದಿನದಂದು ಅಕ್ಕ ಮಾಯಾವತಿಯವರನ್ನು ಭೇಟಿ ಮಾಡಿದ ಜನಸೇನ ಪಕ್ಷದ ನಾಯಕ ಪವನ್ ಕಲ್ಯಾಣ್ ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಿಎಸ್ಪಿಯ ಜೊತೆಗೆ ಮುಂಬರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡರು.
ಜನರು ನಮ್ಮ ಈ ಹೊಂದಾಣಿಕೆಯನ್ನು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿದ್ದಾರೆ. ಬಾಬಾಸಾಹೇಬ್ ಅಂಬೇಡ್ಕರ್, ಕಾನ್ಶಿರಾಂ ಮತ್ತು ಲೋಹಿಯಾರವರ ಆಸೆಯನ್ನು ಪೂರೈಸಲು ನಾವು ಒಂದಾಗಿದ್ದೇವೆ. ಪ್ರಜೆಗಳು ಅಕ್ಕ ಮಾಯಾವತಿಯವರನ್ನು ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯಲ್ಲಿ ನೋಡಬೇಕೆಂದು ಬಯಸುತ್ತಿದ್ದಾರೆ ಎಂದರು.
ನಾನು ಮಾಯಾವತಿಯವರನ್ನು ಪ್ರಧಾನಿಯಾಗಿ ಮಾಡಲು ನನ್ನ ಶಕ್ತಿ ಸಾಮರ್ಥ್ಯವನ್ನು ಧಾರೆ ಎರೆಯುತ್ತೇನೆ ಎಂದು ಜನಸೇನ ಪಕ್ಷದ ನಾಯಕ ಹೇಳಿದರು. ಕಾನ್ಶಿರಾಮರ ಜನ್ಮ ದಿನದಂದು ನಾವಿಂದು ಒಂದಾಗಿದ್ದೇವೆ. ನಮಗೆ ಕಾನ್ಶಿರಾಮರ ಆಶೀರ್ವಾದ ಜೊತೆಗಿದೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401