ರಾಜಕೀಯ
ಬಿ.ಎಸ್.ಪಿ ಪಕ್ಷದ ಬೆಂಬಲ ನಮಗೆ ಸದಾ ಇರುತ್ತೆ : ಹೆಚ್.ಡಿ.ದೇವೇಗೌಡ
ಸುದ್ದಿದಿನ, ಹಾಸನ : ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮಂಗಳೂರಿನಿಂದ ಸ್ಪರ್ಧಿಸುತ್ತಾರೆಂಬ ವಿಚಾರ, ಕಳೆದ 5 ವರ್ಷಗಳಿಂದ ರಾಜ್ಯ ಅಭಿವೃದ್ಧಿಯಾಗಿಲ್ಲ ಈಗಲಾದ್ರೂ ಅಭಿವೃದ್ಧಿಯಾಗಲಿ ಎಂದು ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವ್ಯಂಗವಾಡಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರು ಭೇಟಿ ವಿಚಾರವಾಗಿ ಮಾತನಾಡಿದ ಅವರುಬಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭ್ಯರ್ಥಿಗಳ ಆಯ್ಕೆ ಮಾಡಲು ಬಂದಿಲ್ಲ, ಬೇರೆ ಕಾರ್ಯದ ನಿಮಿತ್ತ ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ಎನ್,ಮಹೇಶ್ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು ಅದು ಅವರ ಪಕ್ಷದ ತೀರ್ಮಾನ, ಮಹೇಶ್ ರವರು ನಮ್ಮ ಜೊತೆ ಈಗಲೂ ಚೆನ್ನಾಗಿದ್ದಾರೆ, ಬಿಎಸ್ ಪಿಯವರು ಈಗಲೂ ನಮಗೆ ಬೆಂಬಲ ನೀಡುತ್ತಿದ್ದಾರೆ, ಮುಂದಿನ ಎಲ್ಲಾ ಚುನಾವಣೆಯಲ್ಲಿಯೂ ನಮಗೆ ಬೆಂಬಲ ನೀಡುತ್ತಾರೆ ಎಂದರು.
ಮಹಾಘಟ್ ಬಂಧನ್ ನಿಂದ ಹಿನ್ನೆಡೆಯಾಗಿ ರಾಜೀನಾಮೆ ನೀಡಿದ್ದಾರೆಂಬ ವಿಚಾರ, ಈಗೆಲ್ಲಾ ಉಹಾಪೋಹ ಬೇಡ ಸುಮ್ಮನೆ ನೀವು ಗೊಂದಲ ಸೃಷ್ಟಿಸಬೇಡಿ. ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ, ರಾಮನಗರಕ್ಕೆ ಅಭ್ಯರ್ಥಿ ಅಂತಿಮವಾಗಿದೆ. ಮಂಡ್ಯದಲ್ಲಿ ಸಚಿವರು ಶಾಸಕರು ಮತ್ತು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಉಪಚುನಾವಣೆ ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲ್ಲಾ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401