ಸಿನಿ ಸುದ್ದಿ

ಚಂದನ್ ಶೆಟ್ಟಿಗೆ ‘ಉಷಾ ಉತ್ತಪ್ಪ’ ಏನಂದ್ರು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ನ್ನಡ ಬಿಗ್ ಬಾಸ್ ಸೀಸನ್- 5 ಗೆದ್ದ ನಂತರ ರಾಪ್ ಸಿಂಗರ್ ಚಂದನ್ ಶೆಟ್ಟಿ ಡಿಮ್ಯಾಂಡ್ ಹೆಚ್ಚಾಗಿದ್ದು, ರಿಯಾಲಿಟಿ ಶೋಗಳ ಮುಖ್ಯ ರೋಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಟಿವಿ ರಿಯಾಲಿಟಿ ಸ್ಟಾರ್ ಕಮ್ ಸಂಗೀತಗಾರ ಚಂದನ್ ಶೆಟ್ಟಿ ಕನ್ನಡ ಕಲರ್ಸ್ ವಾಹಿನಿಯ ಮಾಸ್ಟರ್ ಡ್ಯಾನ್ಸರ್ ರಿಯಾಲಿಟಿ ಶೋನ ಜಡ್ಜ್ ಆಗಿದ್ದಾರೆ. ಈಗ ಮುಂದಿನ ರಿಯಾಲಿಟಿ ಶೋವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮ್ಯುಸಿಕ್ ರಿಯಾಲಿಟಿ ಶೋ ಕನ್ನಡ ಕೋಗಿಲೆಯಲ್ಲಿ ಜಡ್ಜ್ ಆಯ್ಕೆಯಾಗುವ ಮೂಲಕ ತಾವೊಬ್ಬ ಬೇಡಿಕೆಯ ನಟನೆಂದು ತೋರಿಸಿಕೊಂಡಿದ್ದಾರೆ.

ಪಾಪ್ ಸಿಂಗರ್ ಉಷಾ ಉತ್ತುಪ್, ನಿರೂಪಕಿ ಅನುಪಮ ಗೌಡ ಕಾಣಿಸಿಕೊಂಡಿರುವ ಕನ್ನಡ ಕೋಗಿಲೆ ರಿಯಾಲಿಟಿ ಶೋನ ಮೊದಲ ಎಪಿಸೋಡಿನಲ್ಲಿ ಪ್ರೋಮೊ ರಿಚ್ ಆಗಿದ್ದು, ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಕನ್ನಡ ರಿಯಾಲಿಟಿ ಶೋನ ವೇದಿಕೆಯಲ್ಲಿ ಉಷಾ ಉತ್ತಪ್ಪ, “ಚಂದನ್ ಶೆಟ್ಟಿ ಒಬ್ಬ ಉತ್ತಮ ಶಿಕ್ಷಕ” ಎಂದು ಹೇಳುವ ಮೂಲಕ ಕನ್ನಡಿಗರು ಅಚ್ಚರಿ ಪಡುವಂತೆ ಮಾಡಿದೆ. ಭವಿಷ್ಯದಲ್ಲಿ ಕನ್ನಡ ಫಿಲ್ಮ್ ಇಂಡಸ್ಟ್ರಿಯ ಒಂದು ಭಾಗವಾಗಲಿದ್ದಾನೆ ಎಂದಿದ್ದಾರೆ‌.

ಕನ್ನಡದ ಬಿಗ್ ಬಾಸ್ ಮನೆಯಲ್ಲಿದ್ದಾಗ ಚಂದನ್ ಶೆಟ್ಟಿ ತಮ್ಮ ಕಲೆ ಪ್ರದರ್ಶನ ಮಾಡಿದ್ದರು. ಇದನ್ನು ಗಮನಿಸಿದಾಗ ಅವರೊಬ್ಬ ಪ್ರತಿಭಾವಂತ ಎಂದು ಹೇಳಲು ತುಂಬಾ ಖುಷಿಯಾಗುತ್ತದೆ. ಚಂದನನಂತಹ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ, ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version