ರಾಜಕೀಯ
ಸಿದ್ದರಾಮಯ್ಯ ‘ಮತ್ತೆ ಸಿಎಂ’ ಆಗುವೆ ಎಂದರೆ ತಪ್ಪೇನು ? : ಹೆಚ್.ಡಿ.ಕೆ
ಸುದ್ದಿದಿನ,ನವದೆಹಲಿ : ಸಿದ್ದರಾಮಯ್ಯ ಈಗಾಗಲೇ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದಾರೆ. ಅವರು ಮತ್ತೊಮ್ಮೆ ಸಿಎಂ ಆಗುವೆ ಎಂದರೆ ತಪ್ಪೇನು? ಆದ್ದರಿಂದ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿಲ್ಲ ಎಂದು ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಕೆಲವರು ಹಿರಿಯರಾದ ಆರ್.ವಿ. ದೇಶಪಾಂಡೆ ಸಿಎಂ ಆಗಬೇಕು ಅಂತಾರೆ. ದೇಶಪಾಂಡೆಗೆ ಸಿಎಂ ಆಗುವ ಆಸೆ ಹುಟ್ಟಿಸಿದ್ದಾರೆ ಕುಮಾರಸ್ವಾಮಿ. ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗುವ ವಿಚಾರವಾಗಿ ನವದೆಹಲಿಯಲ್ಲಿ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಹೇಳಿಕೆ ನೀಡಿದ್ದು ಸಿದ್ದರಾಮಯ್ಯ ಬೇಜವ್ದಾರಿ ಹೇಳಿಕೆ ನೀಡುವ ವ್ಯಕ್ತಿಯಲ್ಲ. ಅನಾವಶ್ಯಕ ಗೊಂದಲ ಸೃಷ್ಟಿ ಯಾಗುತ್ತಿದೆ. ನಾನು ನನ್ನ ಅನುಭವದಲ್ಲಿ ಸಾಕಷ್ಟು ರಾಜಕೀಯ ಏರುಪೇರು ನೋಡಿದ್ದೇನೆ. ಆ ಥರದ ವಾತಾವರಣ ಈಗಿಲ್ಲ. ಸಿಎಂ ಆಗುವ ವಿಚಾರ ಸಿದ್ದರಾಮಯ್ಯಗೆ ಇಲ. ಸರ್ಕಾರಕ್ಕೆ ಸಿದ್ದರಾಮಯ್ಯ ಬೆಂಬಲ ಇದೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401