ಲೈಫ್ ಸ್ಟೈಲ್

ಪಕ್ಷಿ ಪರಿಚಯ | ಬೆಳ್ಗಣ್ಣ ಹಕ್ಕಿ

Published

on

  • ಪುನೀತ್ ಕುಮಾರ್, ಛಾಯಾಗ್ರಾಹಕ

ಬೆಳ್ಗಣ್ಣ ಹಕ್ಕಿ ಗುಬ್ಬಚ್ಚಿ ಗಾತ್ರದ ಚಿಕ್ಕ ಹಕ್ಕಿ. ಇದರ ಮೈ ಮೇಲಿನ ಭಾಗಗಳು, ಕೊರಳು, ಬಾಲ – ಹಳದಿ ಅಥವಾ ಹಸಿರು ಮಿಶ್ರಿತ ಹಳದಿ, ಕಣ್ಣಿನ ಸುತ್ತಲು ಬಿಳಿ ಉಂಗುರವಿರುವ ಈ ಹಕ್ಕಿಯ – ಹೆಣ್ಣು ಮತ್ತು ಗಂಡು ಹಕ್ಕಿಗಳಲ್ಲಿ ಬಣ್ಣದ ಅಂತರವಿರುವುದಿಲ್ಲ.

ಬೆಳ್ಗಣ್ಣಗಳು ಏಕಾಂಗಿಗಳಲ್ಲ, ಇವು ಹಿಂಡುಗಳಲ್ಲಿ ಕಾಣಿಸಿಕೊಂಡು, ಸಂತಾನ ಅಭಿವೃದ್ಧಿ ಸಮಯದಲ್ಲಷ್ಟೇ ತಾತ್ಕಾಲಿಕವಾಗಿ ಬೇರೆಯಾಗುತ್ತವೆ. ಇವು ನೆಲಕ್ಕಿಳಿಯುವುದು ಬಹಳ ವಿರಳ. ಮರ ಗಿಡಗಳ ಮೇಲೆ ಎಲೆಮರೆಗಳಲ್ಲಿ ಕಾಲಕಳೆಯುತ್ತವೆ. ಫೆಬ್ರವರಿಯಿಂದ – ಸೆಪ್ಟಂಬರ್ ತಿಂಗಳುಗಳ ನಡುವೆ ಸಂತಾನ ಅಭಿವೃದ್ಧಿ ಕ್ರಿಯೆಯಲ್ಲಿ ತೊಡಗಿದರೂ, ಏಪ್ರಿಲ್ ತಿಂಗಳಲ್ಲಿ ಸಂತಾನ ಅಭಿವೃದ್ಧಿ ಚಟುವಟಿಕೆಗಳು ತೀವ್ರವಾಗುತ್ತದೆ.

ಜೇಡರ ಬಲೆ, ಕಲ್ಲು ಹೂಗಳು ಮತ್ತು ಮೆತ್ತನೆಯ ಸಸ್ಯ ಭಾಗಗಳಿಂದ ಚಿಕ್ಕ ಬಟ್ಟಲಾಕಾರದ ಗೂಡನ್ನು ಟೊಂಗೆಗಳ ಮೂಲದಲ್ಲಿ 4 ದಿನಗಳಲ್ಲಿ ಕಟ್ಟಿ, ಸಾಧಾರಣವಾಗಿ 2 ಮಂದ ನೀಲಿ ಬಣ್ಣದ ಮೊಟ್ಟೆಗಳನ್ನು 2-3 ದಿನಗಳ ಅಂತರದಲ್ಲಿ ಇಡುತ್ತವೆ. ಮೊಟ್ಟೆಗಳು 10 ದಿನಗಳಲ್ಲಿ ಮರಿಗಳಾಗುತ್ತವೆ. ತಾಯಿ ಮತ್ತು ತಂದೆ ಹಕ್ಕಿಗಳೆರಡೂ ಸಂತಾನ ಪಾಲನೆಯಲ್ಲಿ ಸಮ ಶ್ರಮಿಗಳು. ಮರಿಗಳು 10 ದಿನಗಳಲ್ಲಿ ಗೂಡು ಬಿಡಲು ತಯಾರಾಗುತ್ತವೆ.ಕೀಟಗಳೇ ಬೆಳ್ಗಣ್ಣಗಳ ಮುಖ್ಯ ಆಹಾರವಾದರೂ, ಇವು ಹಣ್ಣು, ಮಕರಂದಗಳನ್ನೂ ಸೇವಿಸುತ್ತವೆ.

ಫೋಟೋ ಕ್ಲಿಕ್ಕಿಸಿದ ಸ್ಥಳ : ಕುದೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version