ದಿನದ ಸುದ್ದಿ

ತಮಿಳು ನಟ ವಿಜಯ್ ಸೈಕಲ್ ನಲ್ಲಿ ಬಂದು ಓಟ್ ಮಾಡಿದ್ದೇಕೆ..? ನಟನ ಆಪ್ತರು ಹೇಳಿದ್ದೇನು ಗೊತ್ತಾ..?

Published

on

ಸುದ್ದಿದಿನ,ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಮಂಗಳವಾರ ನಡೆಯಿತು. ನಟ, ಸೂಪರ್ ಸ್ಟಾರ್ ಇಳಯ ದಳಪತಿ ವಿಜಯ್ ಸೈಕಲ್‍ನಲ್ಲಿ ಮತಗಟ್ಟೆಗೆ ಬಂದು ವೋಟ್ ಹಾಕಿದ್ದು, ನಟ ವಿಜಯ್ ಗೆ‌ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಟ ಇಳಯದಳಪತಿ ವಿಜಯ್ ಅವರು ಸೈಕಲ್‍ನಲ್ಲಿ ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ ನ್ಯಾಷನಲ್ ಪ್ರೀ ಸ್ಕೂಲ್ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ನಟ ವಿಜಯ್ ಅವರ ಜೊತೆಯಲ್ಲಿ ಸೆಲ್ಫೀ, ಫೋಟೋ ಮತ್ತು ವೀಡಿಯೋವನ್ನು ಕ್ಲಿಕ್ಕಿಸಿಕೊಂಡರು. ಈ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಮಂಗಳವಾರ ಸಖತ್ ವೈರಲ್ ಆಗಿದ್ದಾವೆ.

ನಟ ವಿಜಯ್ ಅಭಿಮಾನಿಗಳು ರಸ್ತೆ ಮಧ್ಯದಲ್ಲಿ ಅವರನ್ನು ಸುತ್ತವರಿದ ಕಾರಣ ಅವರು ಮತಗಟ್ಟೆಗೆ ಸೈಕಲ್ ನಲ್ಲಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ನಂತರ ನಟ ವಿಜಯ್ ತಮ್ಮ ಸಿಬ್ಬಂದಿಯವರ ದ್ವಿಚಕ್ರವಾಹನದಲ್ಲಿ ಹಿಂದೆ ಕುಳಿತು ಮತಗಟ್ಟೆಗೆ ಹೋದರು. ಮತಗಟ್ಟೆಯ ಬಳಿ ಹಲವಾರು ಅಭಿಮಾನಿಗಳು ನಟ ವಿಜಯ್ ನೋಡಲು ನೆರೆದಿದ್ದರು. ನೆರೆದಿದ್ದವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಚ್‌ ಕೂಡ ಮಾಡಬೇಕಾಯಿತು.

ಇಳಯ ದಳಪತಿ ವಿಜಯ್ ಅವರು ಮಾಸ್ಕ್ ಧರಿಸಿಕೊಂಡು ಸೈಕಲ್‌ನಲ್ಲಿ ಮತಗಟ್ಟೆಗೆ ಬಂದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದರು. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಲು ವಿಜಯ್ ಸೈಕಲ್‌ನಲ್ಲಿ ಬಂದಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆ ನಡೆಯಿತು.

ಸೈಕಲ್ ನಟ ವಿಜಯ್ ಬಂದಿದ್ದೇಕೆ..?

ಕಾರ್ ಪಾರ್ಕಿಂಗ್ ಸಮಸ್ಯೆಯನ್ನು ತಪ್ಪಿಸಲು ನಟ ವಿಜಯ್ ಅವರು ಸೈಕಲ್ ನಲ್ಲಿ ಬಂದು ಮತ ಚಲಾಯಿಸಿದರು. ಆದರೆ ಮತಗಟ್ಟೆ ಇರುವ ಕಿರಿದಾದ ಬೀದಿಯಲ್ಲಿ ಪಾರ್ಕಿಂಗ್ ತೊಂದರೆ ತಪ್ಪಿಸಲು ವಿಜಯ್ ಸೈಕಲ್ ನಲ್ಲಿ ಬಂದರು ಎಂದು ಅವರ ಪಿ ಆರ್ ಓ ಸ್ಪಷ್ಟಪಡಿಸಿದ್ದಾರೆ.

“ತಲಪತಿ ವಿಜಯ್ ಅವರು ಕಾರನ್ನು ಬಳಸುವ ಬದಲು ಸೈಕಲ್‌ನಲ್ಲಿ ಹೋಗಲು ನಿರ್ಧರಿಸಿದರು ಏಕೆಂದರೆ ಮತದಾನ ಕೇಂದ್ರವು ಅವರ ನಿವಾಸದ ಪಕ್ಕದಲ್ಲಿಯೇ ಇತ್ತು ಮತ್ತು ಕಾರಿನಲ್ಲಿ ಹೋಗುವುದರಿಂದ ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಬಹುದು. ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿರಲಿಲ್ಲ!” – ರಿಯಾಜ್ ಕೆ ಅಹ್ಮದ್ ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version