ಸಿನಿ ಸುದ್ದಿ

ಕಟ್ಟಪ್ಪ, ಅಲ್ಲಲ್ಲ ಕಿಟ್ಟಪ್ಪ ಶಿವುನ ಯಾಕೆ ಕೊಂದ ಗೊತ್ತಾ?

Published

on

ಸುದ್ದಿ ದಿನ ಡೆಸ್ಕ್:ಕಟ್ಪಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಜನ ಏನೆಲ್ಲ ಕಷ್ಟಪಟ್ಟರು ಗೊತ್ತಲ್ವ, ಈಗ ಅಂತದ್ದೇ ಸವಾಲನ್ನು ಕಿಟ್ಟಪ್ಪ ಹಾಕಿದ್ದಾನೆ.

ಇಂದು ತೆರೆಗೆ ಬರುತ್ತಿರುವ ಶಿವು ಮತ್ತು ಪಾರು ಸಿನಿಮಾ ಜನ್ಮಾಂತರದ ಕತೆ ಹೇಳ್ತಿದೆ. ಇಲ್ಲಿ ಹೀರೊ ಕಿಟ್ಟಪ್ಪ ಶಿವು ಎಂಬ ಪಾತ್ರನ್ನು ಕೊಲ್ಲುತ್ತಾನೆ. ಅದು ಯಾಕೆ ಎಂಬುದೇ ಸಸ್ಪೆನ್ಸ್.
ಅಂದಹಾಗೆ ಈ ಪ್ರಶ್ನೆಗೆ ಉತ್ತರ ಕೊಟ್ಟರೆ ಒಂದು ಲಕ್ಷ ರೂ. ಬಹುಮಾನವನ್ನು ಚಿತ್ರ ತಂಡ ಘೋಷಿಸಿದೆ. ಸಿನಿಮಾದ ಮೊದಲ ಶೋ ನ ಮಧ್ಯಂತರದಲ್ಲಿ ಕಿಟ್ಟಪ್ಪ ಶಿವುನನ್ನು ಯಾಕೆ ಕೊಂದ ಎಂದು ಉತ್ತರಿಸಿದವರಿಗೆ ಒಂದು ಲಕ್ಷ ರೂ. ಸಿಗಿತ್ತಂತೆ ಅಕಸ್ಮಾತ್ ಉತ್ತರಿಸದಿದ್ರೆ, ಮೊದಲು ಪ್ರಯತ್ನ ಮಾಡಿದ ಹತ್ತು ಜನರಿಗೆ ಹಣವನ್ನು ಹಂಚಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ.
ಇಷ್ಟು ದಿನ ತೆರೆ ಹಿಂದೆ ಕೆಲಸ ಮಾಡಿದ ಅಮೆರಿಕ ಸುರೇಶ್ ಅವರು ನಾಯಕನಾಗಿ ಈ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ದಿಶಾ ಪೂವಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದ ಟ್ರೇಲರ್ ಭಾರಿ ಕುತೂಹಲ ಹುಟ್ಟುಹಾಕಿದೆ.

Leave a Reply

Your email address will not be published. Required fields are marked *

Trending

Exit mobile version