ದಿನದ ಸುದ್ದಿ
ಪತ್ನಿ ಕೊಂದು ಮಕ್ಕಳನ್ನು ಹೊತ್ತೊಯ್ದ ಪತಿರಾಯ?
ಸುದ್ದಿದಿನ ಡೆಸ್ಕ್: ಬೆಂಗಳೂರಿನ ಜಯನಗರದಲ್ಲಿರು ಮನೆಯೊಂದರಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬರನ್ನು ಗುಂಡಿಟ್ಟು ಕೊಲ್ಲಲಾಗಿದ್ದು, ಈ ಕೃತ್ಯವನ್ನು ಆಕೆಯ ಪತ್ನಿಯೇ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಸಹನಾ (42) ಸಾವಿಗೀಡಾದ ಮಹಿಳೆ. ಈಕೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಗಣೇಶ್ ಎಂಬುವರನ್ನು ಮದುವೆಯಾಗಿ ನಂತರ ದೂರವಾಗಿದ್ದರು. ಗುಂಡಿಟ್ಟು ಕೊಂದಿರುವ ವ್ಯಕ್ತಿ ಮನೆಯಲ್ಲಿದ್ದ ಮೂವರು ಮಕ್ಕಳನ್ನು ಅಪಹರಿಸಿದ್ದು, ಇದೇ ಕಾರಣಕ್ಕೆ ಗಣೇಶ್ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.
ನಾವೆಲ್ಲ ಮನೆಯಲ್ಲಿದ್ದೆವು ಇದ್ದಕ್ಕಿದ್ದಂತೆ ಗುಂಡಿನ ಶಬ್ದ ಕೇಳಿಸಿತು ಏನಾಗಿದೆ ಎಂದು ಹೊರಗೆ ಹೋಗಿ ನೋಡುವಷ್ಟರಲ್ಲಿ ಸಹನಾ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆ ಕಂಡ ನಾವೆಲ್ಲ ಬೆಚ್ಚಿಬಿದ್ದೆವು ಎಂದು ನೆರೆಹೊರೆಯವರು ತಿಳಿಸಿದ್ದಾರೆ.