ಲೈಫ್ ಸ್ಟೈಲ್

‘ಹಕ್ಕಿ ಪುಕ್ಕ’ದ ಹೊಸ ಪ್ರತಿಭೆ ಈ ಚಂದನ್..!

Published

on

ಶಿರಸಿ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಚಂದನ್ ಸಿ. ಇವರಿಗೆ ಪಕ್ಷಿ ವೀಕ್ಷಣೆ ಬರಿ ಹವ್ಯಾಸವಲ್ಲ.ಇದು ಅವರಿಗೆ ಒಂದು ಹುಚ್ಚಾಗಿ, ಅವರ ಜೀವನದ ಒಂದು ಅಂಗವಾಗಿ ಮಾರ್ಪಟ್ಟಿದೆ. ನಾನು ಚಿಕ್ಕವನಾಗಿದ್ದನಿಂದಲೂ ಪಕ್ಷಿಗಳ ಹೆಸರು ತಿಳಿದುಕೊಳ್ಳುವುದು ಎಂದರೆ ಬಹು ಪ್ರಿಯ.ಅದು ಗಿಳಿಯಾಗಲಿ, ಕೋಗಿಲೆಯಗಲಿ, ಮೈನಾ ಮತ್ತು ಮುಂತಾದವು ಆಗಲೇ ನನ್ನ ಆಸಕ್ತಿ ಪ್ರವೇಶಿಸಿದವು.ಆದರೆ ನಾನು ಅರಣ್ಯ ಕಾಲೇಜಿಗೆ ಸೇರಿದ ಮೇಲೆ ನನಗೆ ಪಕ್ಷಿವೀಕ್ಷಣೆ ಎಂಬುದು ಪ್ರಖರವಾಗಿ ಬೆಳೆದು ಜೀವನದ ಅವಿಭಾಜ್ಯ ಅಂಗವಾಗಿತು. ಸೀನಿಯರ್ಸ್ ಮತ್ತು ಪ್ರಾಧ್ಯಾಪಕರು ಪ್ರೋತ್ಸಾಹ ಇದಕ್ಕೆ ಕಾರಣವಾಗಿದೆ‌ ಎನ್ನುತ್ತಾರೆ ಚಂದನ್.

ನನ್ನ ಪಕ್ಷಿ ವೀಕ್ಷಣೆಯ ಕುತೂಹಲ ಶುರುವಾದದ್ದು ಕುಟ್ರಕ್ಕಿ (White checked barbet)ಯಿಂದ. ಈ ಪಕ್ಷಿಯು ಎತ್ತರದ ಮರಗಲ್ಲಿ ಕುಳಿತು ಕುಟ್ರು- ಕುಟ್ರು ಎಂದು ಜೋರಾಗಿ ಶಬ್ದ ಮಾಡುವುದನ್ನು ನಾನು ಮೊದಲು ಗಮನಿಸಿದ್ದೆ ಮತ್ತು ನನ್ನ ಪಕ್ಷಿವಿಕ್ಷಣೆಗೆಂದು ಕರೆದೊಯ್ದು ನನ್ನ ಸೀನಿಯರ್ಸ್ ಅವರಲ್ಲಿ ಈ ಬಗ್ಗೆ ಕೇಳಿ ತಿಳಿದಿದ್ದೆ.ಅಂದಿನಿಂದ ನಾನು ಸುಮಾರು ಒಂದೂವರೆ ತಿಂಗಳು ಪ್ರತಿದಿನ ಕುಟ್ರು- ಕುಟ್ರು ಎಂಬ ಶಬ್ದ ಕೇಳಲು ಸಾಧ್ಯವಾಯತೆ ಹೊರತು ಆ ಪಕ್ಷಿಯನ್ನು ನೋಡಲು ಸಾಧ್ಯವಾಗಿರಲಿಲ್ಲ. ಒಂದೂವರೆ ತಿಂಗಳ ನಂತರ ಆ ಪಕ್ಷಿಯನ್ನು ನೋಡಿದಾಗ ಆದ ಆನಂದ ಹೇಳತೀರದು ಎನ್ನುತ್ತಾರೆ ಚಂದನ್.ಈಗ ಸುಮಾರು 326 ಪಕ್ಷಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಇವರು ಗಳಿಸಿದ್ದಾರೆ.

ಶಿರಸಿ, ಜೋಗಫಾಲ್ಸ್, ತರೀಕೆರೆ, ಭದ್ರಾ, ಹುಲಿ ಸಂರಕ್ಷಿತ ಪ್ರದೇಶ, ಗುಡವಿ ಪಕ್ಷಿಧಾಮ, ಅತ್ತಿವೇರಿ ಪಕ್ಷಿಧಾಮ, ಕೈಗಾ, ಚಿತ್ರದುರ್ಗ, ಕಡೂರು, ದಾವಣಗೆರೆ, ಚೆನ್ನಗಿರಿ ಮತ್ತು ಚಿಕ್ಕಮಂಗಳೂರು ಮುಂತಾದೆಡೆ ಸ್ನೇಹಿತರು ಮತ್ತು ಸೀನಿಯರ್ಸಗಳೊಂದಿಗೆ ಸುತ್ತಾಡಿ ಪಕ್ಷಿ ವೀಕ್ಷಣೆಯನ್ನು ಮಾಡಿದ್ದಾರೆ. ಶಿರಸಿ ಬರ್ಡ್ಸ್ ಎಕ್ಸ್ಪದೇಶನ್, ಕೈಗಾ ಬರ್ಡ್ಸ್ ಮ್ಯಾರಥನ್, ಹಸಿರು ಪಯಣ ಮತ್ತು ಚಿಣ್ಣರ ವನದರ್ಶನ ಮುಂತಾದ ಕಾರ್ಯಕ್ರಮ ಹಾಗೂ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪಕ್ಷಿಯ ಕುರಿತಾಗಿ ಕಲಿತಿದ್ದಾರೆ – ತಮ್ಮ ಪಕ್ಷಿ ಜ್ಞಾನವನ್ನು ಬರವಣಿಗೆಯ ಮೂಲಕ ಹಂಚಿಕೊಂಡಿದ್ದಾರೆ.

ಚಂದನ್ ಅವರ ಫೋಟೋಗ್ರಫಿ ನೋಡಲು ಕೆಳಗಿರುವ ಅವರ ಫೇಸ್ ಬುಕ್ ಪ್ರೊಫೈಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ. (Chandan c Nehwal)

https://www.facebook.com/nehwalchandan

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version