ಸಿನಿ ಸುದ್ದಿ
ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು : ಬೆಂಕಿ ನಂದಿಸಲು ಅಭಿಮಾನಿಗಳಿಗೆ ಕೈ ಜೋಡಿಸಲು ಮನವಿ ಮಾಡಿದ ‘ಡಿ ಬಾಸ್’
ಸುದ್ದಿದಿನ ಡೆಸ್ಕ್ : ಶನಿವಾರ ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಪರಿಣಾಮ ನೋರಾರು ಎಕರೆ ಅಮೂಲ್ಯ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ.
ಕಾಡ್ಗಿಚ್ಚಿನ ಬೆಂಕಿ ಕ್ಷಣಕ್ಷಣಕ್ಕೂ ತನ್ನ ಕೆನ್ನಾಲಗೆಯನ್ನು ಚಾಚುತ್ತಿದೆ. ಇಂತಹ ವೇಳೆಯಲ್ಲಿ ಈ ಕಾಡ್ಗಿಚ್ಚನ್ನು ತಡೆಯುವ ಕೆಲಸವೂ ನಿರಂತರವಾಗಿ ಸಾಗಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಡ್ಗಿಚ್ಚಿನ ಬಗ್ಗೆ ವಿಷಾದ ವ್ಯಕ್ತ ಪಡಿಸಿ ಟ್ಟೀಟ್ ಮಾಡಿದ್ದಾರೆ.
ಕಾಡ್ಗಿಚ್ಚಿನ ಪರಿಣಾಮ ವನ್ಯಜೀವಿಗಳ ಸಂಕುಲಕ್ಕೆ ತೊಂದರೆತುಂಟಾಗಿದ್ದು, ಈ ಕಾಡ್ಗಿಚ್ಚನ್ನು ನಂದಿಸುವ ಹಾಗೂ ಈ ಅಭಯಾರಣ್ಯವನ್ನು ಸಾಧ್ಯವಾದಷ್ಟು ಪುನರ್ ನಿರ್ಮಾಣ ಮಾಡುವ ಕಾರ್ಯದಲ್ಲಿ ತಮ್ಮ ಅಭಿಮಾನಿಗಳು ಕೈ ಜೋಡಿಸುವುದರ ಮೂಲಕ ಸಹಾಯ ಮಾಡಬೇಕೆಂದು ಕರೆ ನೀಡಿದ್ದಾರೆ.
ದರ್ಶನ್ ಟ್ವೀಟ್
ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನಜೀವಿ ಸಂಕುಲಕ್ಕೆ ತೊಂದರೆಯುಂಟಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಹಲವಾರು ಸ್ವಯಂಸೇವಕರು ಜೊತೆಗೂಡಿ ಈ ಅವಘಡವನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ. ಆಸಕ್ತಿಯುಳ್ಳ ಸ್ವಯಂಸೇವಕರು ದಯಮಾಡಿ ಈ ಅಭಿಯಾನದಲ್ಲಿ ನೆರವಾಗಬೇಕಾಗಿ ವಿನಂತಿ pic.twitter.com/ES0ZsB6Eap
— Darshan Thoogudeepa (@dasadarshan) February 24, 2019
ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನಜೀವಿ ಸಂಕುಲಕ್ಕೆ ತೊಂದರೆಯುಂಟಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಹಲವಾರು ಸ್ವಯಂಸೇವಕರು ಜೊತೆಗೂಡಿ ಈ ಅವಘಡವನ್ನು ಶಮನ ಮಾಡಲು ಯತ್ನಿಸುತ್ತಿದ್ದಾರೆ. ಆಸಕ್ತಿಯುಳ್ಳ ಸ್ವಯಂಸೇವಕರು ದಯಮಾಡಿ ಈ ಅಭಿಯಾನದಲ್ಲಿ ನೆರವಾಗಬೇಕಾಗಿ ವಿನಂತಿ pic.twitter.com/3fjUpWJWM4
— Darshan Thoogudeepa (@dasadarshan) February 24, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401