ಕ್ರೀಡೆ

ವಿರಾಟ್ ಕೊಹ್ಲಿ ಆಡದಿದ್ರೆ ಟಿಆರ್ಪಿ ಲಾಸ್; ಸ್ಟಾರ್ ಸ್ಪೋರ್ಟ್ಸ್ ಅಳಲು

Published

on

ಸುದ್ದಿದಿನ ಡೆಸ್ಕ್: ಭಾರತ ಕ್ರಿಕೆಟ್ ಟೀಮಿನ ಸ್ಟಾರ್ ಆಟಗಾರ, ಕ್ಯಾಪ್ಟನ್ ವಿರಾಟ್ ಕೊಹ್ಲಿ ಟಿವಿ ಟಿಆರ್ಪಿ ಕುಸಿಯುತ್ತದೆ ಎಂದು ಪಂದ್ಯಗಳ ಪ್ರಸಾರದ ಹಕ್ಕುಸ್ವಾಮ್ಯ ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಆಕ್ಷೇಪ ವ್ಯಕ್ತಪಡಿಸಿದೆ. ಭಾರತ ಕ್ರಿಕೆಟ್ ತಂಡದ ಉತ್ತಮ ಆಟಾಗಾರರಾಗಿರುವ ವಿರಾಟ್ ಪಂದ್ಯದ ಸೆಂಟ್ರ್ ಆಫ್ ಅಟ್ರಾಕ್ಷನ್ ಇದ್ದಂತೆ. ಇಂತಹ ಸ್ಟಾರ್ ಆಟಗಾರನಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಇದರಿಂದ ಬೇಸರಗೊಂಡಿರುವ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಟಿಆರ್ಪಿಗೆ ಪೆಟ್ಟು ಬೀಳಲಿದೆ ಆಳಲು ತೋಡಿಕೊಂಡಿದೆ.

ಇಂಗ್ಲೆಂಡಿನ ಪ್ರವಾಸ ಮುಗಿದ ನಂತರ ಭಾರತ ಕ್ರಿಕೆಟ್ ಟೀಮ್ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ, ರೋಹಿತ್ ಶರ್ಮಾಗೆ ಕ್ಯಾಪ್ಟನ್ ಶಿಪ್ ನೀಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಟಾರ್‌ ಸ್ಪೋರ್ಟ್ಸ್, ಕೊಹ್ಲಿ ಪಂದ್ಯದಲ್ಲಿ ಇರದಿದ್ದರೆ ಆಕರ್ಷಣೆ ಕಡಿಮೆಯಾಗುತ್ತದೆ ಎಂದು ಹೇಳಿಕೊಂಡಿದೆ. ಎಸಿಸಿಗೆ ದೂರು ನೀಡಿತ್ತು. ಆದರೆ, ಇದಕ್ಕೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದ್ದು, ಟೀಮ್ ಸೆಲೆಕ್ಷನ್ ನಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದೆ. ಎಸಿಸಿ ಕೂಡ ಆಟಗಾರರ ಆಯ್ಕೆ ವಿಚಾರದಲ್ಲಿ ತಲೆಹಾಕುವುದು ಸರಿಯಲ್ಲ ಎಂದು ಹೇಳಿದೆ.

Leave a Reply

Your email address will not be published. Required fields are marked *

Trending

Exit mobile version