ದಿನದ ಸುದ್ದಿ

ಮಗು ಕೊಂದು ಡೆತ್‌ ನೋಟ್‌ ಬರೆದಿಟ್ಟು ಮಹಿಳೆ ಆತ್ಮಹತ್ಯೆ

Published

on

ಸುದ್ದಿದಿನ,ಬೆಂಗಳೂರು: ಮಗುವನ್ನು ಕೊಂದು ಡೆತ್ ನೋಟ್ ಬರೆದಿಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ದೀಪಾ (31) ಹಾಗೂ ಮೂರುವರೆ ವರ್ಷದ ಮಗು ರಿಯಾ ಸಾವನ್ನಪ್ಪಿದವರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪತಿ ಆದರ್ಶ್ 2017ರಲ್ಲಿ ದೀಪಾ ಅವರನ್ನು ಮದುವೆಯಾಗಿದ್ದರು. ಆರ್.ಆರ್ ನಗರದ ಮಂತ್ರಿ ಅಪಾರ್ಟ್​ಮೆಂಟ್​ನಲ್ಲಿ ದಂಪತಿ ವಾಸವಿದ್ದರು‌.

ಕಳೆದ ಒಂದು ವಾರದಿಂದ ದೀಪಾಗೆ ತೀವ್ರ ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತಿದ್ದ ದೀಪಾ ಚಿಕಿತ್ಸೆ ಪಡೆದರೂ ಕಡಿಮೆಯಾಗಿರಲಿಲ್ಲ. ಇದರಿಂದ‌ ಜಿಗುಪ್ಸೆಗೊಳಗಾಗಿದ್ದ ದೀಪಾ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾಳೆ. ನನ್ನ ಸಾವಿಗೆ ಯಾರು ಕಾರಣರಲ್ಲ. ಜೀವನ ಕಷ್ಟ ಎನಿಸಿದೆ, ಕ್ಷಮಿಸು ಅಮ್ಮ, ದಿವ್ಯಾ, ಸೋನಾ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version