ದಿನದ ಸುದ್ದಿ
ರೈಲ್ವೆ ಪ್ಲಾಟ್ ಫಾರಂನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಗರ್ಭಿಣಿ; ತಾಯಿ, ಮಗು ಇಬ್ವರೂ ಸೇಫ್
ಸುದ್ದಿದಿನ ಡೆಸ್ಕ್: ಮಹಾರಾಷ್ಟ್ರದ ಜಲಗಾವ್ ಜಿಲ್ಲೆಯ ಭುಸವಾಲಾ ರೈಲ್ವೆ ನಿಲ್ದಾಣದ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂನಲ್ಲೇ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಕಾಂಚನಾದೇವಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ.
ರೈಲ್ವೆ ನಿಲ್ದಾಣದಲ್ಲೇ ಹೆರಿಗೆ ಮಾಡಿಕೊಂಡ ಮಹಿಳೆಯು ಮುಂಬೈನಿಂದ ಲಕ್ನೋಗೆ ಪುಷ್ಪಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದರು. ಭುಸವಾಲಾ ರೈಲ್ವೆ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ಬೋಗಿಯಲ್ಲಿದ್ದ ಇತರ ಮಹಿಳೆ ಮಹಿಳೆಯರು ಮತ್ತು ಇದೇ ಸಮಯಕ್ಕೆ ಆಗಮಿಸಿದ ಟಿಕೆಟ್ ಚೆಕರ್ ಕೂಡಲೇ ಭುಸವಾಲಾ ನಿಲ್ದಾಣದ ರೈಲ್ವೆ ಆಸ್ಪತ್ರೆಯ ವೈದ್ಯರ ಸಂಪರ್ಕಿಸಿದರು.
ಬೋಗಿಯಿಂದ ಲಿಫ್ಟ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಬೇಕು ಎನ್ನುವಷ್ಟರಲ್ಲೇ ಮಹಿಳೆ ಪ್ಲಾಟ್ ಫಾರಂನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದಳು. ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401