ದಿನದ ಸುದ್ದಿ
ನವ ವಿವಾಹಿತೆ ಅನುಮಾಸ್ಪಾದ ಸಾವು
ಸುದ್ದಿದಿನ,ಮಂಡ್ಯ : ಜಿಲ್ಲೆಯ ಮದ್ದೂರು ತಾಲ್ಲೂಕು ಕೂಳಗೆರೆ ಗ್ರಾಮದ ರಕ್ಷಿತಾ ಎಂಬ ನವ ವಿವಾಹಿತೆ ನೇಣಿಗೆ ಶರಣಾಗಿದ್ದಾರೆ.
ಅದೇ ಗ್ರಾಮದ ಕೀರ್ತಿರಾಜ್ ಎಂಬ ಯುವಕ ಪ್ರೀತಿಸಿ ಮದುವೆಯಾಗಿದ್ದರು. 15 ದಿನಗಳ ಹಿಂದೆ ಮದ್ದೂರು ಪಟ್ಟಣದ ವಿ.ವಿ.ನಗರದ 5 ನೇ ಕ್ರಾಸ್ ರುದ್ರೇಶ್ ರವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು.
ನೆನ್ನೆ ಸಂಜೆ 6 ಗಂಟೆಗೆ ಕೆಲಸ ಮುಗಿಸಿ ಕೊಂಡು ಕೀರ್ತಿರಾಜ್ ಮನೆಗೆ ಬಂದು ನೋಡಿದಾಗ ನೇಣಿಗೆ ಶರಣಾಗಿರುವುದು ಕಂಡುಬಂದಿದೆ ಈ ವಿಷಯವನ್ನು ಯುವತಿಯ ತಂದೆ ಸಿದ್ದರಾಜು ರವರಿಗೆ ತಿಳಿಸಿ ಹೆಣ್ಣಿನ ಮನೆಯವರು ಸ್ಥಳಕ್ಕೆ ಭೇಟಿ ನೀಡುವ ಹೊತ್ತಿಗೆ ಕೀರ್ತಿರಾಜ್ ಅಲ್ಲಿಂದ ಪರಾರಿಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೇಲ್ನೋಟಕ್ಕೆ ಇದು ಕೊಲೆ ಎಂದು ಕಂಡುಬಂದಿದೆ ಅಂತ ಮೃತರ ಸಂಬಂಧಿಕರು ತಿಳಿಸಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ , ತಹಶೀಲ್ದಾರ್ ಹೆಚ್.ಶಿವಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಪ್ರಭಾಕರ್, ಸಬ್ ಇನ್ಸ್ಪೆಕ್ಟರ್ ಮಂಜೇಗೌಡ ಇತರೆ ಅಧಿಕಾರಿಗಳು ಸ್ಥಳದಲ್ಲಿದ್ದರು ಮದ್ದೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401