ದಿನದ ಸುದ್ದಿ

ಸ್ತ್ರೀ ಅನ್ನುವುದೇ ಒಂದು ವಿಶಿಷ್ಟವಾದ ಶಕ್ತಿ..!

Published

on

  • ವಿದ್ಯಾಶ್ರೀ ಎಸ್ ಮಂಜುನಾಥ್

ಇಂದು ಮಾರ್ಚ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಿಳಾ ಸಮೂಹ ತನ್ನ ಅಸ್ತಿತ್ವ ಹಾಗೂ ಎಲ್ಲಾ ರೀತಿಯ ಸಮಾನತೆಯ ಹಕ್ಕೊತ್ತಾಯಗಳೂಂದಿಗೆ ಆಚರಿಸುವ ದಿನ. 1975 ರಲ್ಲಿ ಮಾರ್ಚ್ 08 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಘೋಷೀಸಲಾಯಿತು, ಈ ಕಾರಣದಿಂದ ಬಹುತೇಕ ರಾಷ್ಟçಗಳು ಮಾರ್ಚ್ 08ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಾಗೇಯೇ ಬರುಬರುತ್ತಾ ಮಹಿಳಾ ದಿನಾಚರಣೆ ಸ್ವರೂಪಗಳಲ್ಲಿ ಬದಲಾವಣೆಗಳು ಅಗುತ್ತಾ ಬಂದಿದೆ .

ಪ್ರಾರಂಭದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಹಿಂದೆ ಉಳಿದಿದ್ದಾರು ಕಾಲಕ್ರಮೇಣ ಎಲ್ಲಾ ಕ್ಷೇತ್ರದಲ್ಲೂ ಮೇಲುಗೈ ಸಾದಿಸುತ್ತ ಮಹಿಳೆ ಸ್ವಾವಲಂಬಿಯಾಗಿ ದಿಟ್ಟತನದಿಂದ ಪ್ರಗತಿಶೀಲ ದಾಪುಗಾಲು ಹಿಡುತ್ತಾ. ಈ ಅಧುನಿಕ ಯುಗದಲ್ಲಿ ಮಹಿಳೆಯರ ಪಾತ್ರ ಬದಲಾಗಿದೆ. ಮಹಿಳೆಯರು ವೃತ್ತಿ ಮತ್ತು ಸಂಸಾರ ಎರಡನ್ನು ಅಚ್ಚುಕಟ್ಟುತನದಿಂದ ನಿಭಾಯಿಸಬಲ್ಲೆ ಎಂದು ದಿಟ್ಟತನದಿಂದ ಹೇಳುತ್ತಾ ಮಾದರಿಯಾಗಿದ್ದಾರೆ.

ಜೀವನದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಶಕ್ತಿ ಇರುತ್ತದೆ ಅಡು ಮುಟ್ಟದ ಸೂಪ್ಪಿಲ್ಲ ಹೆಣ್ಣು ಇರದ ಕ್ಷೇತ್ರವಿಲ್ಲಾ ಎಂಬ ಅದುನಿಕ ಗಾದೆ ಪ್ರಸುತ್ತವಾಗಿದೆ, ಇಂದು ಮಹಿಳೆಯರು ಗಡಿ ಕಾಯುವುದರಿಂದ ಹಿಡಿದು ಕ್ಷಿಪಾಣಿ ಉಡಾಯಿಸುವ ತನಕ ಎಲ್ಲಾ ಕ್ಷೇತ್ರಗಳಲ್ಲಿ ಸಾದಿಸಿ ತೋರಿಸಿದ್ದಾರೆ. ಹೆಣ್ಣು ನಾಲ್ಕು ಗೋಡೆಗಳಿಗೆ ಸೀಮಿತವಾಗದೆ ದೇಶದ ಅತ್ತುನ್ಯತ ಸ್ಥಾನಪಡೆಯುವ ಮಟ್ಟಗೆ ಮಹಿಳೆ ಬದಲಾಗಿದ್ದಾಳೆ, ಎಲ್ಲಾ ಕ್ಷೇತ್ರದಲ್ಲೂ ಪುರಷ ಸಮನಾವಾಗಿ ನಿಂತು ತನ್ನ ಸಾಮರ್ಥ್ಯದ ಅರಿವು ಮೂಡಿಸಿದ್ದಾಳೆ.

ಮುಖ್ಯವಾಗಿ ಮಹಿಳೆ ಸಮಾಜದ ಕಟ್ಟುಪಾಡುಗಳಿಂದ ತನ್ನಿಂದ ತಾನೇ ಬಿಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಹೆಣ್ಣು ತನ್ನನ್ನು ತಾನು ಅರಿತುಕೊಳ್ಳಬೇಕು ತನ್ನಲ್ಲಿರುವ ಅಗಾದವಾದ ಶಕ್ತಿಯ ಮೇಲೆ ಅತ್ಮವಿಶ್ವಾಸಗೊಂಡಾಗ ಮಾತ್ರ ಅಕಾಶದತ್ತಾರಕ್ಕೆ ಬೆಳೆಯಲು ಸಾದ್ಯವಾಗುತ್ತದೆ. ಶಿಕ್ಷಣ, ರಾಜಕೀಯ ,ಸಮಾಜಿಕ ಇತ್ಯಾದಿ ಕ್ಷೇತ್ರದಲ್ಲೂ ಮುಂದುವರೆದು ಸಾಧನೆ ಮಾಡಲು ತನ್ನ ಆತ್ಮ ಸ್ಥೈರ್ಯ ಪ್ರಮುಖವಾಗಿರುತ್ತದೆ.

ಮಹಿಳಾ ವಿಚಾರಧಾರೆಗಳಲ್ಲಿ ಸಮಾಜದಲ್ಲಿ ಸಾಕಾಷ್ಟು ಪರವರ್ತನೆಯಾಗಬೇಕು. ಮುಖ್ಯವಾಗಿ ಶೈಕ್ಷಣೀಕವಾಗಿ ಸದೃಡ ಮಾಡಬೇಕು ಹೆಣ್ಣೂಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಅಯಾಮದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಸಮಾಜದಲ್ಲಿ ಯಾವುದೇ ಕಟ್ಟುಪಾಡುಗಳಿಗೆ ಬಲಿಯಾಗದೆ ದೈರ್ಯದಿಂದ ಸಮಾಜವನ್ನು ಎದುರಿಸಬೇಕು ಸ್ತ್ರೀ ಎನ್ನುವ ಶಕ್ತಿ ಅರಿತು ಛಲದಿಂದ ಮುಂದೆ ಸಾಗಬೇಕು.

ಪ್ರತಿ ಗಂಡಿನ ಯಶಸ್ಸಿನ ಹಿಂದೆ ಸ್ತ್ರೀ ಇರುತ್ತಾಳೆ, ತಾಯಿ ಅಕ್ಕ –ತಂಗಿ ಸ್ನೇಹಿತೆ ಹೆಂಡತಿಯಾಗಿ ಪುರಷನ ಬೆನ್ನುಲೆಬುಯಾಗಿರುತ್ತಾರೆ ಪ್ರತಿಯೊಂದು ಹೆಣ್ಣು ಒಲಿದಾರೆ ನಾರಿ ಮುನಿದಾರೆ ಮಾರಿಯಾಗಿರುತ್ತಾಳೆ. ಈ ಕಾರಣದಿಂದ ಪ್ರತಿಯೊಂದು ಹೆಣ್ಣು ತನ್ನ ಶಕ್ತಿ ಸಾಮರ್ಥ್ಯನುಸಾರ ದಿವ್ಯ ಚೇತನವಾಗಿ ಛಲ ದಿಂದ ಜೀವನ ತಮ್ಮದಾಗಿಸಿಕೊಂಡು ಪ್ರಗತಿಯತ್ತಾ ಸಾಗಬೇಕು. ಮುಖ್ಯವಾಗಿ ಮಹಿಳೆಯ ನೈಜ ಸಶಕ್ತಿಕರಣ ವೆಂದರೆ ಅವಳ ಪ್ರಗತಿಯನ್ನು ಒಪ್ಪಕೊಂಡು ಸಹಕರಿಸುವಂಥ ಪ್ರಸುತ್ತ ಸಮಾಜಕ್ಕೆ ಅವಶ್ಯಕತೆ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version