ಕ್ರೀಡೆ

ಡಿಎಸ್ಪಿ ಸ್ಥಾನದಿಂದ ಪೇದೆಯಾದ ಮಹಿಳಾ ಟಿ20 ಕ್ಯಾಪ್ಟನ್

Published

on

ಸುದ್ದಿದಿನ ಡೆಸ್ಕ್ : ಕಲಿ ಪದವಿ ಪ್ರಮಾಣ ಪತ್ರ ನೀಡಿರು ಆರೋಪದಲ್ಲಿ ಸಿಲುಕಿರುವ ಭಾರತ ಮಹಿಳಾ ಟಿ20 ಕ್ರಿಕೆಟ್ ಕ್ಯಾಪ್ಟನ್ ಹರ್ಮಾನ್ ಪ್ರೀತ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪಂಜಾಬ್ ಸರಕಾರ, ಅವರನ್ನು ಡಿಎಸ್ಪಿ ಸ್ಥಾನದಿಂದ ಕೆಳಗಿಳಿಸಿದ್ದು, ಅವರು ಪೇದೆಯಾಗಿ ಮುಂದುವರಿಯಲಿದ್ದಾರೆ.

2011ರ ಮಾರ್ಚ್ 1ರಂದು ಪೊಲೀಸ್ ಇಲಾಖೆಗೆ ಸೇರಿದ್ದ ಹರಮ್‍ಪ್ರೀತ್ ಅವರ ಪದವಿಯನ್ನು ಪುರಸ್ಕರಿಸಿ ಡಿಎಸ್ಪಿ ಸ್ಥಾನ ನೀಡಲಾಗಿತ್ತು. ಆದರೆ, ಅವರು ನಕಲಿ ಪ್ರಮಾಣ ಪತ್ರ ನೀಡಿದ್ದರು ಎಂಬುದು ತನಿಖೆಯಿಂದ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರನ್ನು ಸ್ಥಾನದಿಂದ ಕೆಳಗಿಳಿಸಿರುವುದಾಗಿ ಪಂಜಾಬ್ ಸರಕಾರ ತಿಳಿಸಿದೆ.

ಮೀರತ್‍ನ ಚೌಧರಿ ಚರಣ್ ವಿವಿಯಿಂದ ಪದವಿ ಪಡೆದಿರುವುದಾಗಿ ಹರಮ್‍ಪ್ರೀತ್ ಅವರು ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ಅದನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದುಬಂದಿದೆ.
ಈ ಕುರಿತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಲು ಸಭೆ ನಡೆಸಿ, ಅವರ ವಿರುದ್ಧ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಕಾರ್ಯಾಲಯವು ಇದನ್ನು ಖಚಿತಪಡಿಸಿದೆ.

ಅರ್ಜುನ ಪ್ರಶಸ್ತಿಯೂ ವಜಾ

ಹರಮ್‍ಪ್ರೀತ್ ಅವರು ನಕಲಿ ಪ್ರಮಾಣ ಪತ್ರ ಸಲ್ಲಿಸಿರುವ ಕುರಿತು ಇನ್ನು ಎಫ್‍ಐಆರ್ ದಾಖಲಾಗಿಲ್ಲ. ಒಂದುವೇಳೆ ಪಂಜಾಬ್ ಸರಕಾರ ಅದನ್ನೂ ಮಾಡಿಬಿಟ್ಟರೆ ಹರಮ್‍ಪ್ರೀತ್ ಅವರ ಅರ್ಜುನ ಪ್ರಶಸ್ತಿಯೂ ರದ್ದಾಗಲಿದೆ.

ಕಾನೂನಿನಲ್ಲಿಲ್ಲ

ಪದವಿ ಪ್ರಮಾಣಪತ್ರ ನಕಲಿ ಎಂಬುದು ತನಿಖೆಗಳಿಂದ ಗೊತ್ತಾಗಿರುವ ಹಿನ್ನೆಲೆಯಲ್ಲಿ ಹರಮ್‍ಪ್ರೀತ್ ಅವರ ವಿದ್ಯಾರ್ಹತೆಯನ್ನು ಪಿಯುಸಿ ಎಂದು ಪರಿಗಣಿಸಲಾಗಿದೆ. ಪೊಲೀಸ್ ಇಲಾಖೆ ಕಾನೂನುಗಳ ಪ್ರಕಾರ ಪಿಯುಸಿ ಓದಿದ್ದರೆ ಪೇದೆ ಕೆಲಸಕ್ಕೆ ಮಾತ್ರ ಪರಿಗಣಿಸಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.

ಅಂತರಾಷ್ಟ್ರೀಯ ಆಟಗಾರ್ತಿ

ಹರಮ್‍ಪ್ರೀತ್ ಅವರು ಮಹಿಳಾ ಟಿ20 ಕ್ರಿಕೆಟ್ ಪಂದ್ಯದಲ್ಲಿ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದವರು. ಕಳೆದ ಹಲವು ವರ್ಷಗಳಕಾಲ ಕ್ರಿಕೆಟ್ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ಈ ದೊಡ್ಡ ಸ್ಥಾನ ನೀಡಲಾಗಿತ್ತು. ಅವರು ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version