ದಿನದ ಸುದ್ದಿ
ಜೂನ್. 1 ರಿಂದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ಸುದ್ದಿದಿನ,ದಾವಣಗೆರೆ : ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕೆರಿಯರ್ ಗೈಡ್‍ನೆಸ್, ಹೈಯರ್ ಎಜುಕೇಶನ್ ಮತ್ತು ಕೆರಿಯರ್ ಅಪಾರ್ಚುನಿಟಿಸ್‍ಗಾಗಿ ಜೂನ್ 1 ಮತ್ತು 3 ರಂದು ಎರಡು ದಿನಗಳ ಕಾರ್ಯಗಾರವನ್ನು ಆನ್‍ಲೈನ್ ವೆಮಿನಾರ್ ಮೂಲಕ ಆಯೋಜಿಸಲಾಗಿದೆ.
ಜೂನ್.1 ರಂದು ವೆಮಿನಾರ್ ನಂ. 25208106583 ಅಂಡ್ ಪಾಸ್ ವಾರ್ಡ್ qsSKG4Dsh84 ಮತ್ತು ಜೂನ್ 3 ರಂದು ವೆಮಿನಾರ್ ನಂ.25259292738 ಅಂಡ್ ಪಾಸ್ ವಾರ್ಡ್ upW2Vtrxh22 ಇದರೊಂದಿಗೆ ಪದವಿ ಪೂರ್ವ ವಿದ್ಯಾರ್ಥಿಗಳು ಭಾಗವಹಿಸಿ ಉನ್ನತ ವ್ಯಾಸಂಗ ಮತ್ತು ಉತ್ತಮ ಉದ್ಯೋಗಕ್ಕೆ ವಿವರವಾದ ಮಾಹಿತಿಯನ್ನು ಪಡೆಯಬಹುದು.
ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ನಾಲ್ಕು ವಿಜ್ಞಾನಿಗಳು ಮೂಲ ವಿಜ್ಞಾನ, ಕೃಷಿ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವ್ಯಾಸಂಗದ ಬಗ್ಗೆ ಸಲಹೆಗಳನ್ನು ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಮೇಶ ಘಾಟಗೆ – 9743084194 & ಚಂದ್ರಶೇಖರಮೂರ್ತಿ – 9686449019 ಅಥವಾ ವೆಬ್ ಸೈಟ್; www.kstacademy.in ವೀಕ್ಷಿಸಬಹುದಾಗಿದೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ರಮೇಶ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243