ದಿನದ ಸುದ್ದಿ
ಹಣದುಬ್ಬರ, ಕೋವಿಡ್ ನಿಭಾಯಿಸುವ ಭಾರತೀಯ ಮಾದರಿಗೆ ವಿಶ್ವದ ಆರ್ಥಿಕ ತಜ್ಞರ ಪ್ರಶಂಸೆ: ಗೃಹ ಸಚಿವ ಅಮಿತ್ ಶಾ
ಸುದ್ದಿದಿನ ಡೆಸ್ಕ್ : ಆರ್ಥಿಕ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ( Narendra Modi ) ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಪರಿಣಾಮಕಾರಿ ಕ್ರಮಗಳಿಂದಾಗಿ ಆರ್ಥಿಕ ಅಭಿವೃದ್ಧಿ ದರದಲ್ಲಿ ( GDP) ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ( Amit Shah) ಹೇಳಿದ್ದಾರೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ( Banglore) ನಿನ್ನೆ ನಡೆದ ’ಸಂಕಲ್ಪದಿಂದ ಸಿದ್ಧಿ’ ( Sankalp Se Siddhi )
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಪ್ರಸ್ತುತ ಭಾರತದ ಅಭಿವೃದ್ಧಿ ದರ ಶೇಕಡ 7.4ರಷ್ಟಿದ್ದು, ಚೀನಾ ಶೇಕಡ 3.3ಮತ್ತು ಬ್ರೆಜಿಲ್ ಶೇಕಡ 1.7ರಷ್ಟು ಅಭಿವೃದ್ಧಿ ದರ ಹೊಂದಿವೆ ಎಂದು ತಿಳಿಸಿದರು.
ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾನವೀಯ ಮುಖವಿರುವ ಆರ್ಥಿಕತೆಯನ್ನು ಪರಿಚಯಿಸಿದ್ದು, ಸಮಾಜದ ಕಟ್ಟಕಡೆಯ ಜನರ ಏಳಿಗೆಗೆ ಹಲವಾರು ಕಲ್ಯಾಣ ಕ್ರಮಗಳನ್ನು ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ಬಡವರಿಗೆ ಮನೆ, ಶೌಚಾಲಯ, ವಿದ್ಯುತ್, ಆರೋಗ್ಯ ವಿಮೆ, ನೀರಿನ ಸಂಪರ್ಕ ಮತ್ತು ಉಚಿತ ಪಡಿತರವನ್ನು ಒದಗಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ಅಮಿತ್ ಶಾ ತಿಳಿಸಿದರು.
ಕೋವಿಡ್ ಮತ್ತು ಹಣದುಬ್ಬರವನ್ನು ನಿಭಾಯಿಸುವ ಭಾರತೀಯ ಮಾದರಿಯನ್ನು ವಿಶ್ವದಾದ್ಯಂತ ಅರ್ಥಶಾಸ್ತ್ರಜ್ಞರು ಪ್ರಶಂಸೆ ಮಾಡಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ | ಆಕಾಶವಾಣಿ, ಎಫ್‌ಎಂ, ದೂರದರ್ಶನ ಚಾನಲ್‌ಗಳಿಗೆ ಅತಿ ಹೆಚ್ಚು ಜನ ಮನ್ನಣೆ: ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್
ಇತರ ದೇಶಗಳು ಉದ್ಯಮಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಪ್ಯಾಕೇಜ್‌ಗಳನ್ನು ಘೋಷಿಸುವತ್ತ ಗಮನಹರಿಸಿದಾಗ, ಪ್ರಧಾನಮಂತ್ರಿಗಳು ಪರಿಹಾರವನ್ನು ಹುಡುಕುವತ್ತ ಗಮನಹರಿಸಿದರು ಮತ್ತು ಲಸಿಕೆಯನ್ನು ಕಂಡುಹಿಡಿಯಲು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು ಎಂದು ಸಚಿವ ಅಮಿತ್ ಶಾ ತಿಳಿಸಿದರು.
ದೇಶದಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಅಭಿಯಾನಗಳ ಮೂಲಕ ಸ್ವದೇಶಿ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243