ದಿನದ ಸುದ್ದಿ
ಕೋವಿಡ್ ನಿರ್ವಹಣೆಯನ್ನು ಭಾರತ ಯಶಸ್ವಿಯಾಗಿ ಮಾಡಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ : ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ
ಸುದ್ದಿದಿನ ಡೆಸ್ಕ್ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಮನ್ಸುಖ್ ಮಾಂಡವೀಯ ಅವರು ದೂರದರ್ಶನ, ಆಕಾಶವಾಣಿ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಪತ್ರಕರ್ತರೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಕಚೇರಿಗಳಲ್ಲಿಯೂ ಕೋವಿಡ್ ನಿರ್ವಹಣೆಯಲ್ಲಿ ಮಾಧ್ಯಮಗಳ ಪಾತ್ರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ದೂರದರ್ಶನ ಮತ್ತು ಆಕಾಶವಾಣಿಯ ಮಹಾನಿರ್ದೇಶಕರು, ಉಪಮಹಾನಿರ್ದೇಶಕರು, ನಿರ್ದೇಶಕರು, ಉಪನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಮನ್ಸುಖ್ ಮಾಂಡವೀಯ, ತಂಬಾಕು ವಸ್ತುಗಳ ನಿರ್ಮೂಲನೆ ಹಾಗೂ ಹೀಲ್ ಇಂಡಿಯಾ ಕಾರ್ಯಕ್ರಮ ಜನಾಂದೋಲನದಲ್ಲಿ ಪಾಲ್ಗೊಂಡು ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಕೋವಿಡ್ ನಿರ್ವಹಣೆಯನ್ನು ಭಾರತ ಯಶಸ್ವಿಯಾಗಿ ಮಾಡಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಶಂಸೆಗೆ ಪಾತ್ರವಾಗಿದೆ. ದೇಶದ ೪ನೇ ಅಂಗವಾಗಿರುವ ಮಾಧ್ಯಮದ ಪಾತ್ರವೂ ಅಪಾರವಾಗಿದೆ. ಜನರಿಗೆ ನಿಖರವಾದ ಮಾಹಿತಿ ನೀಡುವ ಮೂಲಕ ಮಾರ್ಗಸೂಚಿ ಪಾಲನೆಗೆ ನೀಡಿರುವ ಸಲಹೆ-ಸೂಚನೆಗಳು ಅಭಿನಂದನಾರ್ಹ ಎಂದರು.
आज देशभर से रीजनल मीडिया एवं DD/AIR के साथियों से चर्चा की एवं PM @NarendraModi जी व सरकार की तरफ से कोविड महामारी में उनकी अहम भूमिका के लिए धन्यवाद किया।
आगे भी स्वास्थ्य मंत्रालय के कार्यक्रमों व अभियानों में उनका सहयोग मिले ऐसी अपेक्षा रखी। https://t.co/QupF6RHdyL pic.twitter.com/B349USGdkW
— Dr Mansukh Mandaviya (@mansukhmandviya) June 3, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243