ದಿನದ ಸುದ್ದಿ
ವಿಶ್ವ ತಾಯಂದಿರ ದಿನ ಇಂದು; ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅವರಿಂದ ಶುಭಾಶಯ
ಸುದ್ದಿದಿನ ಡೆಸ್ಕ್ : ಇಂದು ವಿಶ್ವ ಅಮ್ಮಂದಿರ ದಿನ. ಎಲ್ಲಾ ತಾಯಂದಿರಿಗೂ ಶುಭಾಶಯ. ತಾಯಿಗಿಂತ ಮಿಗಿಲಾದ ಶಕ್ತಿ ಈ ಜಗದೊಳಗೆ ಕಾಣಲು ಸಾಧ್ಯವಿಲ್ಲ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತಿದೆ.
ಮದರ‍್ಸ್ ಡೇ ಅಥವಾ ತಾಯಂದಿರ ದಿನವನ್ನು 1908ರಲ್ಲಿ ಅಮೆರಿಕಾದಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಅಮೆರಿಕಾದ ಶಾಂತಿ ಕಾರ್ಯಕರ್ತೆ ಅನಾ ಜಾರ್ವಿಸ್ ಅವರು ತಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. 1985ರಲ್ಲಿ ಅನಾ ಅವರ ತಾಯಿ ನಿಧನರಾದರು. ತಾಯಿಯ ಬಹಳ ಪ್ರೀತಿ ವ್ಯಕ್ತಪಡಿಸಲು ಅನಾ ಈ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು. ಅಂತಯೆ, ಪ್ರತಿ ವರ್ಷ ಮೇ8 ರಂದು ತಾಯಂದಿರ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.
ಮಾತೆಯರ ದಿನದ ಅಂಗವಾಗಿ ಗಣ್ಯರು ಶುಭ ಹಾರೈಸಿದ್ದಾರೆ. ಪ್ರೀತಿ, ವಿಶ್ವಾಸ, ವಾತ್ಸಲ್ಯ, ತ್ಯಾಗ ಸೇರಿದಂತೆ ಎಲ್ಲ ಬಗೆಯ ಶಿಕ್ಷಣವು ಮಾತೆಯರಿಂದಲೇ ಮಗುವಿಗೆ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಮಾತೆಯರ ಕೊಡುಗೆ ಅನನ್ಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಸೇರಿದಂತೆ ಗಣ್ಯರು ಗೌರವ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243