ದಿನದ ಸುದ್ದಿ
ದಾವಣಗೆರೆ | ವಿಶ್ವ ತಂಬಾಕುರಹಿತ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆ
ಸುದ್ದಿದಿನ,ದಾವಣಗೆರೆ: ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಯೋಜಿಸಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತದೆ.
ಈ ವರ್ಷ ಕೋವಿಡ್-19 ಇರುವ ಕಾರಣದಿಂದಾಗಿ ಕಾರ್ಯಕ್ರಮವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಈ ಬಾರಿ ರಾಜ್ಯ ತಂಬಾಕು ಘಟಕದ ವತಿಯಿಂದ ಈ ವರ್ಷದ ಧ್ಯೇಯವಾಕ್ಯವಾದ ‘ಯುವ ಪೀಳೀಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ರಕ್ಷಣೆ ಮಾಡುವುದು’ (protecting youth from industry manipulation and preventing them from Tobacco & Nicotine use )ಈ ವಿಷಯ ಕುರಿತು 20 ವರ್ಷದೊಳಗಿನ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ವಿಷಯವನ್ನು ಉತ್ತಮವಾಗಿ ಹಾಗೂ ಅಂದವಾಗಿ ಬರೆದಂತಹ ಮಕ್ಕಳಿಗೆ ಪ್ರಥಮ ಬಹುಮಾನವಾಗಿ ರೂ.3000, ದ್ವಿತೀಯ ಬಹುಮಾನವಾಗಿ ರೂ. 2000 ಹಾಗೂ ತೃತೀಯ ಬಹುಮಾನವಾಗಿ ರೂ. 1000 ಮೊತ್ತವನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ನಗದು ರೂಪದಲ್ಲಿ ವಿತರಿಸಲಾಗುವುದು. ಪ್ರಬಂಧವು 4 ಪುಟ ಮೀರದಂತಿರಬೇಕು.
ಪ್ರಬಂಧ ಬರೆದು ಕಳುಹಿಸಲು ಜೂ. 5 ಕೊನೆಯ ದಿನಾಂಕವಾಗಿದ್ದು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣ, ದಾವಣಗೆರೆ -577004. ಇ-ಮೇಲ್ ವಿಳಾಸ ntcpdavangere@gmail.com ವಾಟ್ಸ್‍ಪ್ ನಂ.9986618696 ಈ ವಿಳಾಸಕ್ಕೆ ಪ್ರಬಂಧವನ್ನು ಕಳುಹಿಸಬೇಕು.
ಅಭ್ಯರ್ಥಿಗಳು ಪ್ರಬಂಧದ ಮೇಲ್ಭಾಗದಲ್ಲಿ ಹೆಸರು, ವಯಸ್ಸು, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ ಅಧಿಕಾರಿ ಡಾ.ರಾಘವೇಂದ್ರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243