ದಿನದ ಸುದ್ದಿ
ವಿಶ್ವ ವಾಣಿಜ್ಯ ಸಂಸ್ಥೆ – ಡಬ್ಲ್ಯುಟಿಒ ಅನುಮತಿ ನೀಡಿದರೆ ಜಗತ್ತಿಗೆ ಭಾರತ ಆಹಾರ ದಾಸ್ತಾನು ಪೂರೈಸಲಿದೆ : ಪ್ರಧಾನಿ ಮೋದಿ
ಸುದ್ದಿದಿನ, ಗುಜರಾತ್ : ವಿಶ್ವ ವಾಣಿಜ್ಯ ಸಂಸ್ಥೆ – ಡಬ್ಲ್ಯುಟಿಒ ಅನುಮತಿ ನೀಡಿದರೆ ಜಗತ್ತಿಗೆ ಭಾರತ ಆಹಾರ ದಾಸ್ತಾನು ಪೂರೈಸಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ನಡೆದ ಮಾತುಕತೆ ವೇಳೆ, ಈ ವಿಷಯವನ್ನು ತಿಳಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುಜರಾತ್‌ನ ಅದಲಾಜ್‌ನಲ್ಲಿ ಶ್ರೀ ಅನ್ನಪೂರ್ಣ ಧಾಮ್ ಟ್ರಸ್ಟ್‌ನ ಹಾಸ್ಟೆಲ್ ಮತ್ತು ಶಿಕ್ಷಣ ಸಂಕೀರ್ಣವನ್ನು ವೀಡಿಯೊ ಕಾನರೆನ್ಸ್ ಮೂಲಕ ಇಂದು ಉದ್ಘಾಟಿಸಿ ಮಾತನಾಡಿದ ಮೋದಿ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದ ವಿವಿಧ ಭಾಗಗಳಲ್ಲಿ ಆಹಾರ ದಾಸ್ತಾನು ಕ್ಷೀಣಿಸುತ್ತಿದೆ, ಜಗತ್ತು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜನ ಬಯಸಿದ್ದನ್ನು ಪಡೆಯಲಾಗುತ್ತಿಲ್ಲ ಎಂದರು.
ಕೋವಿಡ್ ಕಾಣಿಸಿಕೊಂಡ ನಂತರ ಭಾರತ ಸುಮಾರು 80ಕೋಟಿ ಜನರಿಗೆ ಎರಡು ವರ್ಷಗಳಿಂದ ಉಚಿತ ಪಡಿತರವನ್ನು ನೀಡುತ್ತಿದೆ ಎಂದು ತಿಳಿದು ಜಗತ್ತು ಆಶ್ಚರ್ಯಚಕಿತವಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡಿಸೇಲ್ ಸೇರಿದಂತೆ ತೈಲ ಹಾಗೂ ರಸಗೊಬ್ಬರಗಳನ್ನು ಖರೀದಿಸುವುದು ಕಷ್ಟಕರವಾಗಿದೆ.
ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಪ್ರತಿಯೊಬ್ಬರೂ ತಮ್ಮ ಷೇರುಗಳನ್ನು ಭದ್ರಪಡಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಟ್ವೀಟ್
Blessed to take part in a programme at Shree Annapurna Dham in Adalaj, Gujarat. https://t.co/DCCzCkT0dB
— Narendra Modi (@narendramodi) April 12, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243