ದಿನದ ಸುದ್ದಿ

ವಾಹ್, ಮೋದೀಜೀ, ವಾಹ್..!

Published

on

ಸ್ವಾತಂತ್ರ್ಯಾನಂತರದ ಅತ್ಯಂತ ಅತ್ಯಂತ ವಿಜ್ಞಾನ-ಅಪ್ರಿಯ ಸರಕಾರ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಇತರ ವಿಜ್ಞಾನ ಸಂಬಂಧಿ ನಿಧಿಗಳನ್ನು ತೀವ್ರವಾಗಿ ಕಡಿತ ಮಾಡಿರುವ ದಾಖಲೆ ಹೊಂದಿರುವ ಸರಕಾರ, ಖಾಸಗಿ ಚಮಚಾಗಳಿಗೆ ನೆರವಾಗಲು ಹೆಚ್.ಎ.ಎಲ್‍. ಗೆ ತಿವಿದಿರುವ ಸರಕಾರ, ಈಗ ರಾಜಕೀಯ ಪ್ರಯೋಜನಗಳಿಗಾಗಿ ಅಂತರಿಕ್ಷ ತಂತ್ರಜ್ಞಾನದ ಮುನ್ನಡೆಗಳನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ವಾಹ್, ಮೋದೀಜೀ ವಾಹ್!

-ಹೀಗೆಂದು “ಭಾರತೀಯ ವಿಜ್ಞಾನಿಗಳ ಸಾಧನೆಗಳಿಗೆ ಒಂದು ಸಾರ್ವತ್ರಿಕ ಚುನಾವಣೆಗಳ ಸಮಯದಲ್ಲಿ ರಾಜಕೀಯ ಬಣ್ಣ ಪಡೆಯುವುದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಲು ಇರುವ ವಿಶೇಷ ಕಾರಣಗಳ ಬಗ್ಗೆ ಇಡೀ ದೇಶ ತಿಳಿಯ ಬಯಸುತ್ತದೆ “ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ತಮ್ಮ ಟ್ವೀಟ್‍ ನಲ್ಲಿ ಉದ್ಗರಿಸಿದ್ದಾರೆ.

(ಮಾಹಿತಿ ಕೃಪೆ : ಜನಶಕ್ತಿ ಮೀಡಿಯಾ)

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version