ಕ್ರೀಡೆ

ಕುಸ್ತಿಪಟು ರಿತಿಕಾ ಫೋಗಟ್ ಆತ್ಮಹತ್ಯೆಗೆ ಶರಣು

Published

on

ಸುದ್ದಿದಿನ ಡೆಸ್ಕ್ : ಭಾರತದ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಟ್ ಅವರ ಸೋದರ ಸಂಬಂಧಿ ರಿತಿಕಾ ಫೋಗಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಿತಿಕಾ ಅವರು ಕುಸ್ತಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಸೋತಿದ್ದು, ಸೋಲಿನ ನೋವನ್ನು ತಾಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | ಸೈನಾ ನೆಹ್ವಾಲ್ ಭಾರತದ ಮೂರನೇ ಉನ್ನತ ಬ್ಯಾಡ್ಮಿಂಟನ್ ಆಟಗಾರ್ತಿ 

ಒಂದು ವರದಿ ಪ್ರಕಾರ ಮಾ.12 ಮತ್ತು 14ರಂದು ರಾಜಸ್ಥಾನದಲ್ಲಿ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ರಿತಿಕಾ ಭಾಗವಹಿಸಿದ್ದರು. ಇನ್ನು ಇವರ ಸಹೋದರಿಯರ ಜೀವನಾಧಾರಿತ ಚಿತ್ರ ‘ದಂಗಲ್’ ಚಿತ್ರ ಬಾಲಿವುಡ್‌ನಲ್ಲಿ ತೆರೆಕಂಡಿತ್ತು. ಅಮೀರ್ ಖಾನ್ ಈ ಸಿನೆಮಾದ ನಾಯಕನಟನಾಗಿ ಅಭಿನಯಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version